ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಅಗ್ರಿಕಲ್ಚರಲ್ ಇಂಪ್ರೂವ್‍ಮೆಂಟ್ ಸೊಸೈಟಿಯ 2025-30ರ ಸಾಲಿಗೆ ನೂತನ ಅಧ್ಯಕ್ಷರಾಗಿ ಖಾದರ್ ಮಾನ್ಯ ಚುನಾಯಿತಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಗಣಪತಿ ಭಟ್ ಅಚ್ಚಿನೆ ಆಯ್ಕೆಯಾದರು. ಸಮಿತಿಯ ಚುನಾವಣೆ ಸಹಕಾರಿ ಸಂಘದ ಇನ್ಸ್ಪೆಕ್ಟರ್ ಬೈಜು ರಾಜ್ ಅವರ ಮೇಲ್ವಿಚಾರಣೆಯಲ್ಲಿ ನಡೆದಿತ್ತು. ಆಡಳಿತ ಸಮಿತಿಯ ಸದಸ್ಯರಾಗಿ ಜಗದೀಶ್ ಮೂಡಂಬೈಲು, ಗೋಪಾಲ್ ಡಿ, ಕಮಲಾಕ್ಷಿ ಕೆ, ಸುಜಾತ ಶೆಟ್ಟಿ, ಮೋಯ್ದೀನ್ ಪುಣೆ, ಶ್ವೇತಾ ಕೆ, ಇರ್ಶಾದ್, ಮುಬಾರಕ್, ಕುಶಲ್ ಜಿ ಮತ್ತು ಇತರರನ್ನು ಆಯ್ಕೆ ಮಾಡಲಾಗಿದೆ.

-KHADAR%20MANYA.jpg)
