ಬದಿಯಡ್ಕ: ಬ್ರಹ್ಮಕಲಶೋತ್ಸವದ ಸನಿಹದಲ್ಲಿರುವ ಕಾರ್ಮಾರು ಶ್ರೀ ಮಹಾವಿಷ್ಣು ದೇವರ ಅಲಂಕಾರದ ಆಭರಣಕ್ಕಾಗಿ ನಾಡಿನ ಭಗವದ್ಭಕ್ತರು ದೇವರ ಸನ್ನಿಧಿಯಲ್ಲಿ ಭಕ್ತಿಭಾವಗಳೊಂದಿಗೆ ಚಿನ್ನ-ಬೆಳ್ಳಿ ಸಮರ್ಪಣೆ ಮಾಡಿದರು. ವಾರ್ಷಿಕ ಜಾತ್ರಾ ದಿನ ಭಾನುವಾರ ಶ್ರೀಸನ್ನಿಧಿಯಲ್ಲಿ ಜರಗಿದ ಕಾರ್ಯಕ್ರಮವನ್ನು ಯುವ ಕೃಷಿಕ ಗೋಪಾಲಕೃಷ್ಣ ನಾವಡ ದೀಪಬೆಳಗಿಸಿ ಉದ್ಘಾಟಿಸಿದರು.
ಬೆಳಗ್ಗೆ ಶ್ರೀ ದೇವರಿಗೆ ನವಕಾಭಿಷೇಕ ಜರಗಿತು. ನಂತರ ಜರಗಿದ ವಿಷ್ಣುಭಕ್ತಸಂಗಮದಲ್ಲಿ ಶ್ರೀಕ್ಷೇತ್ರ ಪೆರ್ಣೆಯ ರಮೇಶ್ ಚೆಟ್ಟಿಯಾರ್ ಎಂ.ಕೆ. ದಿಕ್ಸೂಚಿ ಭಾಷಣ ಮಾಡಿದರು. ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರ,ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಬ್ರಹ್ಮಕಲಶೋತ್ಸವದ ಅನ್ನದಾನ ಕೂಪನ್‍ನ್ನು ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಧುಸೂದನ ಆಯರ್ ಮಂಗಳೂರು ರಜತಕಲಶದ ಕೂಪನ್‍ನ್ನು ಬಿಡುಗಡೆಗೊಳಿಸಿದರು. ಕೃಷ್ಣಮೂರ್ತಿ ಪುದುಕೋಳಿ, ಗೋಪಾಲ ಭಟ್ ಪಿ.ಎಸ್. ಪಟ್ಟಾಜೆ, ಶ್ರೀಕೃಷ್ಣ ಭಟ್ ಪುದುಕೋಳಿ, ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ರಾಮ ಕೆ.ಕಾರ್ಮಾರು, ಹಿರಿಯರಾದ ಮಾನ ಮಾಸ್ತರ್, ಶ್ಯಾಮಪ್ರಸಾದ್ ಮೇಗಿನಡ್ಕ, ರಂಜಿತ್ ಯಾದವ್, ಮಹೇಶ್ ವಳಕ್ಕುಂಜ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವಕ ವೃಂದದ ಅಧ್ಯಕ್ಷ ವಿಜಯಕುಮಾರ್ ಮಾನ್ಯ ಸ್ವಾಗತಿಸಿ, ಟ್ರಸ್ಟಿ ರಾಧಾಕೃಷ್ಣ ರೈ ಕಾರ್ಮಾರು ವಂದಿಸಿದರು. ಉಪಾಧ್ಯಕ್ಷ ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು.

.jpg)
