ಕಾಸರಗೋಡು: ವಿದ್ಯಾನಗರ ಸರ್ಕಾರಿ ಕಾಲೇಜು ಜನರಲ್ ಲೈಬ್ರರಿಯಲ್ಲಿ ಉಪಯೋಗ ಶೂನ್ಯವಾಗಿರುವ ಪುಸ್ತಕಗಳನ್ನು ಫೆಬ್ರವರಿ 5 ರಂದು ಬೆಳಗ್ಗೆ 11 ಗಂಟೆಗೆ ಕಾಲೇಜು ಲೈಬ್ರರಿಯಲ್ಲಿ ಹರಾಜು ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕೊಟೇಶನ್ ಅಹ್ವಾನ:
ಕಾಸರಗೋಡು ವಿದ್ಯಾನಗರದ ಸರ್ಕಾರಿ ಸ್ಟಾಫ್ ಕ್ವಾರ್ಟರ್ಸ್ ಸಮೀಪ ಇರುವ ಮರಗಳನ್ನು ತುಂಡರಿಸಲು ಕೊಟೇಷನ್ ಆಹ್ವಾನಿಸಲಾಗಿದೆ. ಕೊಟೇಶನನ್ನು ಪ್ರಾಂಶುಪಾಲರು, ಕಾಸರಗೋಡು ಸರ್ಕಾರಿ ಕಾಲೇಜು, ವಿದ್ಯಾನಗರ ಎಂಬ ವಿಳಾಸಕ್ಕೆ ಜನವರಿ 31 ರಂದು ಬೆಳಗ್ಗೆ 11 ಗಂಟೆಯ ಮೊದಲು ಕಳುಹಿಸಬೇಕು. ಕೊಟೇಷನ್ ಕವರಿನ ಹೊರಭಾಗದಲ್ಲಿ 'ಮರಗಳನ್ನು ತುಂಡರಿಸಲಿರುವ ಕೊಟೇಷನ್'ಎಂದು ನಮೂದಿಸಬೇಕು. ಜನವರಿ 31ರಂದು ಸಂಜೆ 3ಗಂಟೆಗೆ ಕೊಟೇಷನ್ ತೆರೆಯಲಾಗುವುದು. ಇ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 256027)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




