ಕಾಸರಗೋಡು: ಶತಮಾನಗಳ ಇತಿಹಾಸ ಪರಂಪರೆ ಹೊಂದಿರುವ ಆದೂರು ಶ್ರೀ ಭಗವತೀ ದೈವಸ್ಥಾನದಲ್ಲಿ ಮೂರುವರೆ ಶತಮಾನಗಳ ನಂತರ ಇದೇ ಮೊದಲ ಬಾರಿಗೆ ಪೆರುಂಕಳಿಯಾಟ ಮಹೋತ್ಸವದ ಪೂರ್ವಭಾವಿಯಾಗಿ ಮ್ಯಾರಥಾನ್ ಬುಧವಾರ ಕಾಸರಗೋಡಿನಲ್ಲಿ ನಡೆಯಿತು.
ಕಸರಗೋಡು ನುಳ್ಳಿಪ್ಪಾಡಿಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎನ್.ಎ ನೆಲ್ಲಿಕುನ್ನು ಅವರು ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಹೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ನೂರಾರು ಮಂದಿ ಓಟಗಾರರನ್ನೊಳಗೊಂಡ ಮ್ಯಾರಥಾನ್ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಲ್ಲಿ ಸಂಪನ್ನಗೊಂಡಿತು. ಜ. 19ರಿಂದ 24ರ ವರೆಗೆ ಪೆರುಂಕಳಿಯಾಟ ಜರುಗಲಿದೆ.


