ಕಾಸರಗೋಡು: ಕರ್ನಾಟಕದಲ್ಲಿ ಶೇಕಡಾ 15ರಷ್ಟು ದರ ಏರಿಕೆಯಾಗಿದ್ದು, ಕೇರಳ ಮತ್ತು ಕರ್ನಾಟಕ ನಡುವಿನ ಒಪ್ಪಂದದ ಪ್ರಕಾರ ಕೇರಳ ಆರ್‍ಟಿಸಿ ದರವೂ ಕಾಸರಗೋಡಿನ ಅಂತಾರಾಜ್ಯ ಬಸ್ ಗಳಲ್ಲಿ ಹೆಚ್ಚಾಗಿರುವುದರಿಂದ ಗಡಿನಾಡಿನ ಜನತೆಗೆ ಹೆಚ್ಚಿನ ಹೊರೆಯಾಗಿದ್ದು, ಸಿಎಂ ಸಿದ್ಧರಾಮಯ್ಯ ಅವರು ಈ ಜನವಿರೋದಿ ನೀತಿಯನ್ನು ಕೈಬಿಡುವಂತೆ ಮಹಿಳಾ ಮೋರ್ಚಾ ನೇತಾರೆ ಅಶ್ವಿನಿ ಎಂ.ಎಲ್ ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲಿ ಮಹಿಳೆಯರಿಗೆ ಕೆಎಸ್ಸಾರ್ಟಿಸಿಯಲ್ಲಿ ಉಚಿತ ಬಸ್ ಪ್ರಯಾಣವನ್ನು ಒದಗಿಸಿರುವುದರಿಂದಲೇ ಸಾರಿಗೆ ನಿಗಮದ ವೆಚ್ಚದಲ್ಲಿ ಭಾರಿ ಏರಿಕೆಯುಂಟಾಗಿದೆ. ಈ ಹೆಚ್ಚುವರಿ ಹೊರೆಯನ್ನು ಸಮತೋಲನಗೊಳಿಸಲು ಟಿಕೆಟ್ ದರಗಳನ್ನು ಹೆಚ್ಚಿಸಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಉಚಿತ ಪ್ರಯಾಣದಿಂದ ಪ್ರಯೋಜನದ ಬದಲಾಗಿ ಆರ್ಥಿಕ ಒತ್ತಡ ಹೆಚ್ಚಲು ಕಾರಣವಾಗಿದೆ. ಸರ್ಕಾರದ ಈ ದರ ಏರಿಕೆ ಜನವಿರೋಧಿ ಕ್ರಮವಾಗಿದ್ದು, ಈ ನಿರ್ಧಾರದ ವಿರುದ್ಧ ಪ್ರಬಲ ಹೋರಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಕೆಎಸ್ಸಾರ್ಟಿಸಿ ಬಸ್ ದರ ಏರಿಕೆ ಗಡಿನಾಡು ಕಾಸರಗೋಡು ಜನತೆಯ ಪಾಲಿಗೆ ಆರ್ಥಿಕ ಹೊರೆಯನ್ನುಂಟುಮಾಡಿದೆ. ಕೇರಳ ಸರ್ಕಾರ ತೀರ್ಮಾಮ ಕೈಗೊಳ್ಳದಿದ್ದರೂ, ಅಂತರಾಜ್ಯ ಸಾರಿಗೆ ಒಪ್ಪಂದದ ಮರೆಯಲ್ಲಿ ಕಾಸರಗೋಡಿನಿಂದ ಕರ್ನಾಟಕಕ್ಕೆ ತೆರಳುವ ಕೇರಳ ಸಾರಿಗೆ ಬಸ್ ಕೂಡಾ ಸಮಾನವಾಗಿ ದರ ಏರಿಸಿರುವುದು ಅಕ್ಷಮ್ಯ ಮತ್ತು ಖಂಡನೀಯ. ಇದರ ವಿರುದ್ದ ಜನಾಂದೋಲನ ನಡೆಸಬೇಕಾದ ಅನಿವಾರ್ಯತೆಯಿದೆ ಎಂದು ಅಶ್ವಿನಿ ಎಂ.ಎಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.




.jpg)
