ಕಾಸರಗೋಡು: ತಂದೆಯ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಬರ್ಬರವಾಗಿ ಕೊಲೆಗೈದಿದ್ದ ಆರೋಪಿ ಪುತ್ರ, ತನ್ನ ಪತ್ನಿ ಮನೆಯ ಬಾವಿಯ ರಾಟೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ. ಕಾಸರಗೋಡು ಸನಿಹದ ಬೇಕಲ ಪೆÇೀಲೀಸ್ ಠಾಣಾ ವ್ಯಾಪ್ತಿಯ ಪಳ್ಳಿಕೆರೆಯಲ್ಲಿ ಘಟನೆ. ಪಳ್ಳಿಕೆರೆ ಸೈಂಟ್ ಮೇರೀಸ್ ಶಾಲೆ ಸನಿಹದ ನಿವಾಸಿ ದಿ. ಅಪ್ಪಕುಞÂ ಅವರ ಪುತ್ರ ಪ್ರಮೋದ್(36)ಉದುಮ ನಾಲಾಂವಾದುಕಲ್‍ನಲ್ಲಿರುವ ತನ್ನ ಪತ್ನಿ ಮನೆಯ ಬಾವಿಯ ರಾಟೆ ಹಗ್ಗದಲ್ಲಿ ನೇಣಿಗೆ ಶರಣಾಗಿದ್ದಾನೆ.
ತಂದೆ ಅಪ್ಪಕುಞÂ ಅವರನ್ನು 2024 ಏ. 1ರಂದು ತೆಂಗಿನಕಾಯಿ ಸುಲಿಯುವ ಸಲಕರಣೆಯಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆಗೈದಿದ್ದು, ಬೇಕಲ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಕ್ಷುಲ್ಲಕ ಕಾರಣಕ್ಕಾಗಿ ಮನೆಯೊಳಗಿದ್ದ ಅಪ್ಪಕುಞÂ ಅವರನ್ನು ಬಾಗಿಲು ಒಡೆದು ನುಗ್ಗಿ ಪೈಶಾಚಿಕ ರೀತಿಯಲ್ಲಿ ತಲೆಗೆ ಬಡಿದು ಗಂಭೀರ ಗಾಯಗೊಳಿಸಿದ್ದನು. ತಕ್ಷಣ ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪ್ರಮೋದ್ 2024 ಅಕ್ಟೋಬರ್ ತಿಂಗಳಲ್ಲಿ ಜಾಮೀನು ಪಡೆದು ಹೊರಬಂದಿದ್ದನು. ಜ. 13ರಂದು ಪ್ರಕರಣದ ವಿಚಾರಣೆ ನಡೆಯಲಿರುವ ಮಧ್ಯೆ ಪ್ರಮೋದ್ ಮೃತದೇಹ ಮಂಗಳವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಮೋದ್ ಪತ್ನಿ ನಾಲ್ಕು ತಿಂಗಳ ಹಿಂದೆ ಈತನನ್ನು ತೊರೆದು ತವರಿಗೆ ತೆರಳಿದ್ದಳು. ಈ ಮಧ್ಯೆ ಪತ್ನಿ ಮನೆಯ ಬಾವಿ ರಾಟೆಗೆ ನೇಣು ಬಿಗಿದು ಪ್ರಮೋದ್ ಆತ್ಮಹತ್ಯೆಗೈದಿದ್ದಾನೆ.





