HEALTH TIPS

ವಾಸ್ತುಶಿಲ್ಪಿ ತುಕಾರಾಮ ಆಚಾರ್ಯ ಮಾಯಿಪ್ಪಾಡಿ ನಿಧನ

ಕಾಸರಗೋಡು: ಪ್ರಸಿದ್ಧ ವಾಸ್ತುಶಿಲ್ಪಿ ಮಧೂರು ಸನಿಹದ ಮಾಯಿಪ್ಪಾಡಿ ನಿವಾಸಿ ತುಕಾರಾಮ ಆಚಾರ್ಯ(86)ಮಂಗಳವಾರ  ನಿಧನರಾದರು. ಆನೆಗುಂದಿ ಕುಲಗುರು ಪೀಠದ  ಶಿಷ್ಯರಾಗಿದ್ದ ಇವರು ಆನೆಗುಂದಿ ಮಹಾಸಂಸ್ಥಾನದ ಪುನರುತ್ಥಾನದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜಗದ್ಗುರುಗಳವರ ಪೂರ್ವಾಶ್ರಮದ ಜತೆ ನಿಕಟ ಸಂಪರ್ಕ ಹೊಂದಿದ್ದ ಇವರು ಕುಲ ಗುರುಪೀಠಪುನರುತ್ಥಾನದ ಯೋಜನೆಯ ಸಾಕಾರಕ್ಕಾಗಿ ಅವಿರತವಾಗಿ ಪ್ರಯತ್ನಿಸಿದ್ದರು.

ವಾಸ್ತುಶಿಲ್ಪಿಯಾಗಿ ಮಧೂರು ಶ್ರೀ ಕಾಳಿಕಾಂಬಾ ಮಠ ಸೇರಿದಂತೆ ಹಲವು ದೇವಸ್ಥಾನ,ಭಜನಾ ಮಂದಿರ ದೈವಸ್ಥಾನಗಳ ವಾಸ್ತುಶಿಲ್ಪಿಯಾಗಿ ಖ್ಯಾತಿ ಹೊಂದಿದ್ದರು.ಇವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಆನೆಗುಂದಿ ಮಹಾಸಂಸ್ಥಾನದಿಂದ ಶ್ರೀ ಸರಸ್ವತೀ ಅನುಗ್ರಹ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು. ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಆಡಳಿತ ಸಮಿತಿ, ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶ ಸಮಿತಿಯಲ್ಲಿ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದ ಇವರು ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರು ಪತ್ನಿ, ಪುತ್ರಿ, ಮೂವರು ಪುತ್ರರನ್ನು ಅಗಲಿದ್ದಾರೆ.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries