ಕಾಸರಗೋಡು : ಜಿಲ್ಲಾ ಪಂಚಾಯಿತಿ 2024-25ರ ವಾರ್ಷಿಕ ಯೋಜನೆಯಲ್ಲಿ ಸೇರ್ಪಡೆಗೊಳಿಸಿ ಪರಿಶಿಷ್ಟ ಜಾತಿಗೆ ಸೇರಿದ ಮಿಶ್ರ ಗುಂಪುಗಳಿಗೆ ಸಂಗೀತ ವಾದ್ಯೋಪಕರಣ ಸಿಂಗಾರಿಮೇಳವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಅವರು ಸಿಂಗಾರಿಮೇಳ ವಿತರಣೆಯ ಉದ್ಘಾಟನೆ ನಡೆಸಿದರು. ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮನು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಶಕುಂತಳಾ, ವಕೀಲೆ ಎಸ್.ಎನ್.ಸರಿತಾ, ಎಂ.ಮನು, ಗೀತಾಕೃಷ್ಣನ್, ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಹಾಗೂ ಇತರರು ಭಾಗವಹಿಸಿದ್ದರು.





