ಕಾಸರಗೋಡು: ರಾಷ್ಟ್ರೀಯ ಆಯುಷ್ ಮಿಷನ್ ವತಿಯಿಂದ ಜಿಲ್ಲೆಯಲ್ಲಿ ಫಾರ್ಮಸಿಸ್ಟ್ ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 40 ವರ್ಷ ವಯೋಮಿತಿಯಾಗಿದ್ದು, ಡಿಪೆÇ್ಲಮಾ ಯಾ ಆಯುರ್ವೇದ ಫಾರ್ಮಸಿಸ್ಟ್ ಕೋರ್ಸ್ ನಲ್ಲಿ ಕೇರಳ ಸರ್ಕಾರ ಅಂಗೀಕೃತ ಪ್ರಮಾಣಪತ್ರ ವಿದ್ಯಾರ್ಹತೆಯಾಗಿದೆ. ಆಸಕ್ತ ಉದ್ಯೋಗಾರ್ಥಿಗಳು ವಯಸ್ಸು ಮತ್ತು ಅರ್ಹತಾ ಪ್ರಮಾಣಪತ್ರಗಳ ಸ್ವಯಂ ದೃಢೀಕರಿಸಿದ ಪ್ರತಿಗಳ ಸಹಿತ ಜಿಲ್ಲಾ ಕಾರ್ಯಕ್ರಮ ನಿರ್ವಾಹಕರು, ರಾಷ್ಟ್ರೀಯ ಆಯುಷ್ ಮಿಷನ್, ಎರಡನೇ ಮಹಡಿ, ಜಿಲ್ಲಾ ಆಯುರ್ವೇದ ಆಸ್ಪತ್ರೆ, ಪಡನ್ನಕ್ಕಾಡು ಪಿ.ಓ., ಕಾಸರಗೋಡು 671314 ಎಂಬ ವಿಳಾಸಕ್ಕೆ ಜನವರಿ 23 ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಫಾರ್ಮನ್ನು https://nam.kerala.gov.in ಎಂಬ ವೆಬ್‍ಸೈಟ್ ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.




