ಕಾಸರಗೋಡು: ನಂಬಿಕೆ, ಆಚಾರದ ಹೆಸರಿನಲ್ಲಿ ಮಹಿಳೆಯರ ಶೋಷಣೆ ಕೊನೆಗೊಳಿಸುವಂತೆ ರಾಜ್ಯ ಮಹಿಳಾ ಆಯೋಗದ ಸದಸ್ಯೆ ವಕೀಲೆ, ಪಿ ಕುಞËಯಿಷಾ ತಿಳಿಸಿದ್ದಾರೆ. ಅವರು ಕಾಸರಗೋಡು ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಜಿಲ್ಲಾ ಮಟ್ಟದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಧಾರ್ಮಿಕ ಆಚಾರಗಳ ನೆಪದಲ್ಲಿ ಸಮಾಜಲ್ಲಿ ನಡೆಯುವ ಅನೇಕ ವಿಚಾರಗಳು ಕೆಲವು ಮಹಿಳೆಯರನ್ನು ಮಾನಸಿಕ, ದೈಹಿಕ ಹಾಗೂ ಆರ್ಥಿಕವಾಗಿ ಶೋಷಿಸುವ ಒಂದು ಮಾರ್ಗವಾಗಿದೆ.
ಮನೆಯಲ್ಲಿ ತಲೆದೋರುವ ಕೆಲವೊಂದು ಸಮಸ್ಯೆಗಳ ನೆಪದಲ್ಲಿ ವಿವಾಹವಾಗಿ ಮನೆಗೆ ಆಗಮಿಸುವ ಮಹಿಳೆಯ ಶೋಷಣೆ ನಡೆಸಲಾಗುತ್ತಿದ್ದು, ಇದಕ್ಕೆ ಮಹಿಳೆಯ ಗಂಡ, ಅತ್ತೆ-ಮಾವ ಸಮಾನ ಕಾರಣರಾಗುತ್ತಿದ್ದಾರೆ. ವಿದ್ಯಾವಂತ ಮಹಿಳೆಯರು ಕೂಡ ಇಂತಹ ಶೋಷಣೆ ವಿರುದ್ಧ ಪ್ರತಿಕ್ರಿಯಿಸುವುದಿಲ್ಲ. ಫೆÇೀನ್ ಮೂಲಕ ವಿಚ್ಛೇದನ ಪಡೆಯುವ ರೀತಿಯೂ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ವಿದ್ಯಾವಂತ ಹುಡುಗಿಯರಿಗೂ ಕಾನೂನಿನ ರಕ್ಷಣೆ ಬಗ್ಗೆ ಮಾಹಿತಿಯಿಲ್ಲದಿರುವುದರಿಂದ ಶೋಷಣೆ ಸಹಿಸಿಕೊಂಡು ಜೀವನ ಸಾಗಿಸುವ ಸ್ಥಿತಿಯಿದೆ. ಇಂತಹ ವಿಷಯಗಳ ಬಗ್ಗೆ ಮಹಿಳಾ ಆಯೋಗವು ಸಾಮಾಜಿಕ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ನಡೆದ ಸಭೆಯಲ್ಲಿ 32 ದೂರುಗಳನ್ನು ಪರಿಗಣಿಸಲಾಗಿದೆ. ಇದರಲ್ಲಿ ಏಳು ದೂರುಗಳಿಗೆ ಪರಿಹಾರ ನೀಡಲಾಗಿದ್ದು, ಒಂದು ದೂರನ್ನು ಜಾಗೃತ ಸಮಿತಿಗೂ ಇನ್ನೊಂದು ದೂರನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೂ ರವಾನಿಸಲಾಗಿದೆ. 25 ದೂರುಗಳನ್ನು ಮುಂದಿನ ನ್ಯಾಯಪೀಠ ಕ್ಕೆ ಮುಂದೂಡಲಾಗಿದೆ. ವನಿತಾ ಸೆಲ್ ಎಎಸ್‍ಐ ಎಂ. ಅನಿತಾ, ಸಿಪಿಒ ಕೆ.ಸಿ. ಶೀಮಾ, ಕುಟುಂಬ ಸಲಹೆಗಾರ ರಮ್ಯಾಮೋಳ್, ವಕೀಲೆ ಎಂ. ಇಂದಿರಾ, ಮಹಿಳಾ ಆಯೋಗದ ಸಿಬ್ಬಂದಿ ಉಪಸ್ಥಿತರಿದ್ದರು.


