ಕಾಸರಗೋಡು: ಆರಿಕ್ಕಾಡಿಕೋಟೆ ವಠಾರದ ಪಾಳುಬಾವಿಯಲ್ಲಿ ನಿಧಿಶೋಧನೆ ನಡೆಸಿದ ಮೊಗ್ರಾಲ್‍ಪುತ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಜೀಬ್ ಕಂಬಾರ್ ರಾಜೀನಾಮೆಗೆ ಆಗ್ರಹಿಸಿ ಎಡರಂಗ ಪಂಚಾಯಿತಿ ಸಮಿತಿ ವತಿಯಿಂದ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಲಾಯಿತು
ಧರಣಿಗೆ ಮೊದಲು ನಡೆದ ಪ್ರತಿಭಟನಾ ಮೆರವಣಿಗೆಯನ್ನು ಐಎನ್‍ಎಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜೀಜ್ ಕಡಪ್ಪುರ ಉದ್ಘಾಟಿಸಿದರು. ಎಡರಂಗ ಪಂಚಾಯಿತಿ ಸಮಿತಿ ಅಧ್ಯಕ್ಷ ಮಹಮ್ಮದ್‍ಕುಞÂ ಅಧ್ಯಕ್ಷತೆ ವಹಿಸಿದ್ದರು. ಎಲ್‍ಡಿಎಫ್ ಮುಖಂಡರಾದ ಟಿ. ಎಂ. ಎ. ಕರೀಂ, ಎಂ. ಕೆ. ರವೀಂದ್ರನ್, ಕೆ. ಕುಞÂರಾಮನ್, ಎಸ್. ರವೂಫ್, ಖಲೀಲ್ ಎರಿಯಾಲ್, ಶುಕೂರ್ ಎರಿಯಾಲ್, ಹನೀಫ್ ಕಡಪ್ಪುರ, ಸಫೀರ್ ಗುಲ್ಜಾರ್, ಕೆ. ಇಂದಿರಾ, ಎ. ಪಿ. ರಫೀಕ್, ಎಂ. ಸಿರಾಜ್, ಕೆ. ಎಂ. ರಿಯಾಜ್, ಅಫೀದ್ ಕಡವತ್ ಮತ್ತು ಅಸರ್ ಪೆರಿಯಡ್ಕ ನೇತೃತ್ವ ವಹಿಸಿದ್ದರು. ಸಿಪಿಎಂ ಸ್ಥಳೀಯ ಕಾರ್ಯದರ್ಶಿ ರಫೀಕ್ ಕುನ್ನಿಲ್ ಸ್ವಾಗತಿಸಿದರು.

