ಕಾಸರಗೋಡು: ಆರಿಕ್ಕಾಡಿಕೋಟೆಯಲ್ಲಿ ಇದೆಯೆನ್ನಲಾದ ನಿಧಿ ಅಪಹರಣಕ್ಕೆ ಯತ್ನಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜತೆಗೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹಿಂದೂ ಐಕ್ಯವೇದಿ ಜಿಲ್ಲಾಧಿಕಾರಿಯನ್ನು ಭೇಟಿಮಾಡಿ ಮನವಿ ಸಲ್ಲಿಸಿದೆ. ಪ್ರಾಚ್ಯವಸ್ತು ಇಲಾಖೆಯ ಆಧೀನದ ಕೋಟೆಗೆ ಸಂರಕ್ಷಣೆ ನೀಡುವುದರೊಂದಿಗೆ ನಿಧಿ ಅಪಹರಣ ಯತ್ನ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಮೊಗ್ರಾಲ್ ಪುತ್ತೂರು ಪಂ. ಉಪಾಧ್ಯಕ್ಷ ಹಾಗೂ ಮುಸ್ಲಿಂ ಲೀಗ್ ನಾಯಕನ ನೇತೃತ್ವದಲ್ಲಿ ಐದುಮಂದಿಯ ತಂಡ ಈ ಕೃತ್ಯ ಎಸಗಿದ್ದು, ಇವರನ್ನು ಕುಂಬಳೆ ಪೆÇೀಲೀಸರು ವಶಕ್ಕೆ ಪಡೆದು, ಠಾಣೆಯಿಂದ ಜಾಮೀನಿನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ನಿಗೂಢತೆ ಇದ್ದು, ಪ್ರಾಚ್ಯವಸ್ತು ಇಲಾಖೆ ತನಿಖೆಗೆ ಮುಂದಾಗಬೇಕೆಂದು ಹಿಂದೂ ಐಕ್ಯ ವೇದಿಕೆಯ ಜಿಲ್ಲಾ ಘಟಕನೀಡಿದ ದೂರಿನಲ್ಲಿ ಜಿಲ್ಲಾಧಿಕಾರಿಯನ್ನು ಮನವಿಮಾಡಿದೆ.
ಹಿಂದೂ ಐಕ್ಯ ವೇದಿ ಜಿಲ್ಲಾಧ್ಯಕ್ಷ ಎಸ್ ಪಿ.ಷಾಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರ್, ಜಿಲ್ಲಾ ಕಾರ್ಯಧ್ಯಕ್ಷ ಗೋಪಾಲಕೃಷ್ಣನ್ ತಚ್ಚಂಗಾಡ್, ಜಿಲ್ಲಾ ಉಪಾಧ್ಯಕ್ಷ ಉದಯಗಿರಿ ರಾಮ ಗುರುಸ್ವಾಮಿ ನಿಯೋಗದಲ್ಲಿದ್ದರು.

