ಉಪ್ಪಳ: ಉಪ್ಪಳ ಐಲ ಕುದುಪುಳ ನಿವಾಸಿ, ಬಾಯಾರು ಗ್ರಾಮಾಧಿಕಾರಿ ಕಚೇರಿಯ ವಿಲ್ಲೇಜ್ ಅಸಿಸ್ಟೆಂಟ್ ಹರಿಪ್ರಸಾದ್ ಯಾನೆ ಪಚ್ಚು(48)ಅವರ ಮೃತದೇಃ ಮನೆ ಸನಿಹದ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಸ್ಥಳೀಯ ನಿವಾಸಿಗಳು ನೀಡಿದ ಮಾಹಿತಿಯನ್ವಯ ಮಂಜೇಶ್ವರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹ ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆ ಶವಾಗಾರ ತಲುಪಿಸಿದ್ದಾರೆ. ಈ ಹಿಂದೆ ಉಪ್ಪಳ ಗ್ರಾಮಾಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

