ಕಾಸರಗೋಡು: ಮಂಜೇಶ್ವರ ವರ್ಕಾಡಿ ಪೊಯ್ಯೆತ್ತಬೈಲು ಮಾನವಾಟಿ ಬೀವಿ ಮಖಾಂ ಉರುಸ್ ಹಾಗೂ ಧಾರ್ಮಿಕ ಪ್ರವಚನ ಜ. 16ರಿಂದ ಫೆ.2ರವರೆಗೆ ನಡೆಯಲಿದೆ ಎಂದು ಜಮಾ ಅತ್ ಸಮಿತಿ ಅಧ್ಯಕ್ಷ ಡಿಎಂಕೆ ಮುಹಮ್ಮದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜ. 16ರಂದು ಮಧ್ಯಾಹ್ನ 2ಗಂಟೆಗೆ ಜಮಾತ್ ಅಧ್ಯಕ್ಷ ಅತ್ತುಲ್ಲಾಅವರು ಧ್ವಜಾರೋಹಣ ನಡೆಸುವರು. ರಾತ್ರಿ ನಡೆಯುವ ಪ್ರವಚನ ಕಾರ್ಯಕ್ರಮವನ್ನು ಕೆ.ಎಸ್.ಅಟ್ಟಕೋಯ ತಮಂ ಕುಂಬೋಳ್ ಉದ್ಘಾಟಿಸುವರು. ಅಹಮದ್ ಜಲಾಲುದ್ದೀನ್ ಪೆÇಸೋಟ್ ಅಧ್ಯಕ್ಷತೆ ವಹಿಸುವರು. ಜಮಾತ್ ಖಾಸಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಉಪಸ್ಥಿತರಿರುವರು. 19ರಂದು ಸಂಜೆ ಮಹಲ್ ಸಂಗಮವನ್ನು ಮೂಸಾ ಮದನಿ ಉದ್ಘಾಟಿಸುವರು. 21 ರಂದು ಜಲಾಲಿಯ ರಾತೀಬ್ ಮತ್ತು 25 ರಂದು ಸಲಾತ್ ವಾರ್ಷಿಕೋತ್ಸವ ನಡೆಯಲಿದೆ. 16 ದಿನಗಳ ಉರುಸ್ ಕಾರ್ಯಕ್ರಮಗಳ ಸಮಾರೋಪ ಸಮಾರಂಭವನ್ನು ಫೆ. 1ರಂದು ಇಬ್ರಾಹಿಂ ಖಲೀಲುಲ್ ಬುಖಾರಿ ಕಡಲುಂಡಿ ಉದ್ಘಾಟಿಸುವರು. ಮಶ್ಹೂದ್ ಸಖಾಫಿ ಗುಡಲೂರುಪ್ರಧಾನ ಭಾಷಣ ಮಾಡುವರು. ಫೆ. 2ರಂದು ನೂರಾರು ಜನರಿಗೆ ತುಪ್ಪದ ಅನ್ನ ವಿತರಣೆ ಮಾಡುವ ಮೂಲಕ ಉರುಸ್ ಸಂಪನ್ನಗೊಳ್ಲಲಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಮಾ ಅತ್ ಸಮಿತಿ ಪದಾಧಿಕಾರಿಗಳಾದ ಖತೀಬ್ ಅಬ್ದುಲ್ ಜಬ್ಬಾರ್ ಸಖಾಫಿ, ಎನ್.ಜಮಾಲುದ್ದೀನ್, ಟಿ.ಎ.ಸಿದ್ದೀಕ್ ಹಾಜಿ, ಪಿ.ಕೆ.ಹನೀಫ ಉಪಸ್ಥಿತರಿದ್ದರು.


