ಕಾಸರಗೋಡು: ಸರ್ಕಾರದ ನಿದೇರ್ಶದನ್ವಯ ಮೋಟಾರು ವಾಹನ ಇಲಾಖೆ ಹಾಗೂ ಕಾಸರಗೋಡು ಜಿಲ್ಲಾ ಬಸ್ ಆಪರೇಟರ್ಸ್ ಫೆಡರೇಶನ್ ಸಂಯುಕ್ತಾಶ್ರಯದಲ್ಲಿ ಬಸ್ ನೌಕರರಿಗೆ ಜಾಗೃತಿ ತರಗತಿ ಕುತ್ತಿಕ್ಕೋಲಿನಲ್ಲಿ ಜರುಗಿತು. ಕಾಸರಗೋಡು ಆರ್‍ಟಿಓ ಅಧಿಕಾರಿಗಳು ತರಗತಿ ನಡೆಸಿದರು.
ಜಿಲ್ಲಾ ಬಸ್ ಸಿಬ್ಬಂದಿ ಸಮವಸ್ತ್ರ ಮತ್ತು ಬ್ಯಾಡ್ಜ್ ಧರಿಸಿ ತಮ್ಮ ನಡವಳಿಕೆಯಿಂದ ಉತ್ತಮ ಚಾಲನಾ ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳಬೇಕು. ಬಸ್ ಸಿಬ್ಬಂದಿಯ ಶ್ಲಾಘನೀಯ ನಡವಳಿಕೆ ಪ್ರಯಾಣಿಕರಲ್ಲಿ ಉತ್ತಮ ಬಾಂಧವ್ಯಕ್ಕೆ ಕಾರಣವಾಗುವ ನಿಟ್ಟಿನಲ್ಲಿ ಜಾಗ್ರತಿ ತರಗತಿ ಆಯೋಜಿಸಲಾಗಿತ್ತು. ಜಾಗೃತಿ ತರಗತಿಯಲ್ಲಿ ಬಸ್ ಸಿಬ್ಬಂದಿ ಮತ್ತು ಬಸ್ ಮಾಲೀಕರು ಭಾಗವಹಿಸಿದ್ದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಸಜಿ ಪ್ರಸಾದ್ ತರಗತಿ ಉದ್ಘಾಟಿಸಿದರು. ಜಂಟಿಆರ್‍ಟಿಒ ಪ್ರವೀಣ್ ಸಿ.ವಿ ತರಗತಿ ನಿರ್ವಹಿಸಿದರು. ಎಎಂವಿಐ ಮನೀಶ್ ಬಸ್ ಮಾಲೀಕರ ಪ್ರತಿನಿಧಿಗಳಾದ ಸಿ. ಎ ಮುಹಮ್ಮದ್‍ಕುಞÂ, ಕೆಎನ್ ಬಾಲಕೃಷ್ಣನ್, ಕಾರ್ತಿಕ್ ರಾಜ್, ಮುಹಮ್ಮದ್ ಬಶೀರ್, ರಾಜನ್ ಅಕ್ಷಯ, ರಾಧಾಕೃಷ್ಣನ್ ಅಕ್ಷಯ, ಪ್ರಸಾದ್ ಅಕ್ಷಯ, ಶ್ರೀರಾಜ್ ಶ್ರೀಯಾ, ಮೋಹನನ್ ತೇಜ ಮತ್ತು ರತ್ನಾಕರನ್ ಉಪಸ್ಥಿತರಿದ್ದರು. ತರಗತಿಯಲ್ಲಿ ಪಾಲ್ಗೊಮಡ ಪ್ರತಿನಿಧೀಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಬಸ್ ಆಪರೇಟರ್ಸ್ ಫೆಡರೇಶನ್ ಅಧ್ಯಕ್ಷ ಕೆ. ಗಿರೀಶ್ ಸ್ವಾಗತಿಸಿದರು. ಎಂವಿಐ ಶ್ರೀನಿವಾಸನ್ ವಂದಿಸಿದರು.





