HEALTH TIPS

ಮಾರ್ಚ್ 01 ರಿಂದ 08 ರ ವರೆಗೆ ಮಂಜೇಶ್ವರ ಶ್ರೀ ಕೀರ್ತೇಶ್ವರ ಸದಾಶಿವ ದೇವಸ್ಥಾನದಲ್ಲಿ ಶ್ರೀ ಸದಾಶಿವ ಹಾಗೂ, ಪರಿವಾರ ದೇವರುಗಳಿಗೆ "ಪುನರ್ ಪ್ರತಿಷ್ಠಾ ಅಷ್ಟಬಂಧ ಬಹ್ಮಕಲಶೋತ್ಸವ

 ಮಂಜೇಶ್ವರ: ಸುಮಾರು 800 ವರ್ಷಗಳ ಇತಿಹಾಸವಿರುವ ಮಂಜೇಶ್ವರದ ಪ್ರಸಿದ್ಧ ಶ್ರೀ ಕೀರ್ತೇಶ್ವರ ಸದಾಶಿವ ದೇವಸ್ಥಾನದಲ್ಲಿ ಶ್ರೀ ಕೀರ್ತೇಶ್ವರ ಸದಾಶಿವ ದೇವರ ಹಾಗೂ ಪರಿವಾರ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬಹ್ಮಕಲಶೋತ್ಸವ ಮಾ. 01 ರಿಂದ ಮಾ. 8 ರವರೆಗೆ ಬ್ರಹ್ಮ ಶ್ರೀ ಬಡಾಜೆ ಬೂಡು ಗೋಪಾಲಕೃಷ್ಣ ತಂತ್ರಿಗಳವರ ದಿವ್ಯ ಹಸ್ತದಿಂದ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. 

ಮಾ.1 ರಂದು ಶನಿವಾರ ಬೆಳಿಗ್ಗೆ  9.00ಕ್ಕೆ ತಂತ್ರಿವರೇಣ್ಯರ ಹಾಗೂ ಋತ್ವಿಜರ ಆಗಮನ, ಪೂರ್ಣ ಕುಂಭ ಸ್ವಾಗತ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಹ ವಾಚನ, ಗಣಪತಿ ಹೋಮ ಸಹಿತ ವಿವಿಧ ವಿಧಿವಿಧಾನಗಳು ಜರಗಲಿದೆ. 


ಮಾ.2 ರಂದು ಭಾನುವಾರ ಬೆಳಿಗ್ಗೆ  7 ಕ್ಕೆ ಅಂಕುರ ಪೂಜೆ ಗಣಪತಿ ಹೋಮ ಸಹಿತ ವಿವಿಧ ವಿಧಿವಿಧಾನಗಳು , ಅನ್ನಸಂತರ್ಪಣೆ, ಅಪರಾಹ್ನ 2.17 ಕ್ಕೆ ಶ್ರೀ ಕೇತ್ರ ಉದ್ಯಾವರ ಮಾಡದ ಬಳಿಯಿಂದ ಹಸಿರು ವಾಣಿ ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆ, ಬಳಿಕ ಉದ್ಘಾಟನಾ ಸಭೆ ನಡೆಯಲಿದೆ. ಶ್ರೀ ಕ್ಷೇತ್ರ ಉದ್ಯಾವರ ಮಾಡದ ಅಣ್ಣ ದೈವದ ಪಾತ್ರಿ  ರಾಜ ಬೆಲ್ಚಪ್ಪಾಡ ಪ್ರಾರ್ಥನೆ ನೆರವೇರಿಸುವರು. ಶ್ರೀ ಕ್ಷೇತ್ರ ಮಾಡದ ಅಣ್ಣ ದೈವದ ಸೇವಕ  ಬೀರು ಚೌಟರು, ತಮ್ಮ ದೈವದ ಪಾತ್ರಿ ತಿಮಿರಿ ಬೆಲ್ಚಪ್ಪಾಡ, ಮುಂಡತ್ತಾಯ ದೈವದ ಪಾತ್ರಿ ಮಂಜು ಬೆಲ್ಚಪ್ಪಾಡ, ಐಸ್ರಾಲು ಗುತ್ತಿನ ಮಂಜು ಭಂಡಾರಿ ಯಾನೆ ಸುಕುಮಾರ ಶೆಟ್ಟಿ, ಮೋಯಿಸ್ರಾಲು ಗುತ್ತಿನ ತಿಮ್ಮ ಭಂಡಾರಿ, ಓಮಯ ಯು ಯಾನೆ ಮಂಜು ಉದ್ಯಾವರ ಮಾಡ, ಶ್ರೀಯಾನ್ ಕುಟುಂಬಸ್ಥರಾದ ಉದಯ ಪೂಜಾರಿ, ಸುರೇಂದ್ರ ಗುರಿಕಾರ ಪಡುಸ್ಥಾನ, ಸುನಿಲ್ ಗುರಿಕಾರ ಮೊದಲಾದವರಿರುವÀರು.

ಮಾ.3 ರಂದು ಶುಕ್ರವಾರ ಬೆಳಿಗ್ಗೆ 6.ಕ್ಕೆ ಗಣಪತಿ ಹೋಮ, ಅಂಕುರ ಪೂಜೆ, 7.26 ರ ಮೀನ ಲಗ್ನದಲ್ಲಿ ಶ್ರೀ ಸದಾಶಿವ ದೇವರ ಹಾಗೂ ಮಹಾಗಣಪತಿ ದೇವರ ಪುನರ್ ಪ್ರತಿμÉ್ಠ ಜೀವ ಕಲಶಾಭಿಷೇಕ, 08.06 ಕ್ಕೆ ಶ್ರೀ ಶಾಸ್ತಾವೇಶ್ವರ ದೇವರ ಪ್ರತಿμÉ್ಠ,  ಜೀವ ಕಲಶಾಭಿಷೇಕ, 8.56 ಕ್ಕೆ ಶ್ರೀ ದುರ್ಗಾ ದೇವಿಯ ಪ್ರತಿಷ್ಠೆ, ಜೀವ ಕಲಶಾಭಿμÉೀಕ, ಮಹಾ ಮೃತ್ಯುಂಜಯ ಹೋಮ, ನಿತ್ಯ ನೈಮಿತ್ಯಾಧಿಗಳು ನಿರ್ಣಯ, ಮಧ್ಯಾಹ್ನ ಗಂಟೆ 12.30 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಕ್ಕೆ ಅಘೋರ ಹೋಮ, ಸುದರ್ಶನ ಹೋಮ, ದಿಶಾ ಹೋಮ, ಅಂಕುರ ಪೂಜೆ ರಾತ್ರಿ ಪೂಜೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಗಳು ದೀಪ ಪ್ರಜ್ವಲನೆ ಗೈಯಲಿರುವರು. ಮಂಜೇಶ್ವರ ಗಾಣಿಗ ಯಾನೆ ಸಪಲ್ಯ ಸುಧಾರಕ ಸಂಘದ ಅಧ್ಯಕ್ಷ ತುಕರಾಮ್ ಕುಂಬ್ಳೆ ಅಧ್ಯಕ್ಷತೆ ವಹಿಸುವರು. ವಿವಿಧ ವಲಯದ ಪ್ರಮುಖರು ಉಪಸ್ಥಿತರಿರುವರು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ರಾತ್ರಿ 8.30 ರಿಂದ ಗುರು ಶ್ರೀ ಬಾಲಕೃಷ್ಣ ಮಂಜೇಶ್ವರ ನಾಟ್ಯ ನಿಲಯ ಅವರ ಶಿಷ್ಯರಿಂದ ನೃತ್ಯ ರಂಜನೆ "ಶಿವಾಂಜಲಿ" ನಾದ ನೃತ್ಯ ಪ್ರಿಯಂ ನಡೆಯಲಿದೆ. ಮಾ.4 ರಂದು ಮಂಗಳವಾರ ಬೆಳಿಗ್ಗೆ 7. ಕ್ಕೆ ಅಂಕುರ ಪೂಜೆ, 108 ಕಾಯಿ ಮಹಾಗಣಪತಿ ಹೋಮ, ತ್ರಿಕಾಲ ಪೂಜೆ, ಪವಮಾನ ಹೋಮ, ಶತರುದ್ರಾಭಿಷೇಕ, ಮಹಾರುದ್ರಯಾಗ, ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.ಕ್ಕೆ ಮಾತೆಯರ ಸಮಾವೇಶ ಮಾತೃ ಸಂಗಮ ನಡೆಯಲಿದ್ದು, ಶ್ರೀ ಕ್ಷೇತ್ರ ಒಡಿಯೂರಿನ ಪರಮ ಪೂಜ್ಯ  ಶ್ರೀ ಸಾದ್ವಿ ಮಾತಾನಂದಮಂಯೀ ಆಶೀರ್ವಚನ ನೀಡಲಿರುವರು. ವಿಶ್ವ ಹಿಂದೂ ಪರಿಷತ್ ಕಣ್ಣೂರು ವಿಭಾಗ ಮಾತೃ ಶಕ್ತಿ ಪ್ರಮುಖ್ ಮೀರಾ ಆಳ್ವ ದೀಪ ಪ್ರಜ್ವಲನೆ ನಡೆಸುವರು.  ಕೀರ್ತೇಶ್ವರ ಮಹಿಳಾ ಮಂಡಳಿ ಅಧ್ಯಕ್ಷೆ ರೇವತಿ ಶೈಲೇಶ್ ಅಧ್ಯಕ್ಷತೆ ವಹಿಸಲಿರುವರು. ವಿವಿಧ ವಲಯದ ಗಣ್ಯರು ಭಾಗವಹಿಸುವರು.

05 ರಂದು ಬುಧವಾರ ಬೆಳಿಗ್ಗೆ 7.00 ಕ್ಕೆ ಗಣಪತಿ ಹೋಮ, ಅಂಕುರ ಪೂಜೆ, ತತ್ವ ಹೋಮ, ತತ್ವಕಲಶ, ಚಂಡಿಕಾಯಾಗ, ನಾಗದೇವರಿಗೆ ಕಲಶಾಭಿμÉೀಕ, ಬ್ರಹ್ಮಕಲಶ ಮಂಡಲ ರಚನೆ, ಮಹಾಪೂಜೆ, ಅನ್ನಸಂತರ್ಪಣೆ, ಬೆಳಿಗ್ಗೆ ಗಂಟೆ 10. ಕ್ಕೆ ಶ್ರೀ ಶಾಸ್ತಾವೇಶ್ವರ ಭಜನಾ ಮಂಡಳಿ ಇವರಿಂದ ಭಜನಾ ಸಂಕೀರ್ತನೆ, ಸಂಜೆ 6. ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀವರ್ಚನ ನೀಡಲಿರುವರು. ಮಂಜೇಶ್ವರ ಶ್ರೀ ಶನೈಶ್ಚರ ಮಂದಿರದ ಧರ್ಮದರ್ಶಿ ಶ್ರೀ ಕೃಷ್ಣ ಭಟ್ ದೀಪ ಪ್ರಜ್ವಲನೆಗೈಯ್ಯುವರು ವಿವಿಧ ವಲಯದ ಗಣ್ಯರು ಭಾಗವಹಿಸುವರು. 

ಮಾ.06 ರಂದು ಗುರುವಾರ ಬೆಳಿಗ್ಗೆ 6. ಕ್ಕೆ ಅಂಕುರ ಪೂಜೆ ಸಹಿತ ವಿವಿಧ ವಿಧಿವಿಧಾನಗಳು, 7.56 ರ ಮೀನ ಲಗ್ನದಲ್ಲಿ ಮಹಾಗಣಪತಿ, ಶಾಸ್ತಾ ದೇವರಿಗೆ ಬ್ರಹ್ಮಕಲಶಾಭಿಷೇಕ, 11.10 ಕ್ಕೆ ವೃಷಭ ಲಗ್ನದಲ್ಲಿ ಶ್ರೀ ದುರ್ಗಾ ದೇವಿಯ ಬ್ರಹ್ಮಕಲಶಾಭಿಷೇಕ, ಶ್ರೀ ಶಿವ ಸಹಸ್ರನಾಮಾವಳಿ ಯಾಗ, ರಕೇಶ್ವರಿ ದೈವಗಳ ಕಲಶಾಭಿಷೇಕ, ಮಹಾಪೂಜೆ ಅನ್ನಸಂತರ್ಪಣೆ, ನಡೆಯಲಿದೆ.

ಸಂಜೆ 6. ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ವಿಜಯಾನಂದ ಸ್ವಾಮೀಜಿ, ಬೈಲಹೊಂಗಲ ಆಶೀವರ್ಚನ ನೀಡಲಿರುವರು. ವಿವಿಧ ವಲಯಗಳ: ಗಣ್ಯರು ಉಪಸ್ಥಿತರಿರುವರು.

ಮಾ. 07 ರಂದು ಶುಕ್ರವಾರ ಬೆಳಿಗ್ಗೆ 6.ಕ್ಕೆ ಗಣಪತಿ ಹೋಮ, 8.59 ರ ಮೀನ ಲಗ್ನದಲ್ಲಿ ಶ್ರೀ ಸದಾಶಿವ ದೇವರಿಗೆ 505 ಬ್ರಹ್ಮ ಕಲಶಾಭಿಷೇಕ, ಪ್ರಸನ್ನ ಪೂಜೆ, 10.30 ಕ್ಕೆ ಮಹಾಪೂಜೆ, ಶ್ರೀ ದೇವರ ಬಲಿ, ಪಲ್ಲಪೂಜೆ, ರಾಜಾಂಗಣ ಪ್ರಸಾದ ವಿತರಣೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 12 ಕೆ ್ಕಅಂತರ್ ರಾಷ್ಟ್ರೀಯ ಖ್ಯಾತಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಯರಾಮ ಕೆ. ಮತ್ತು ಬಳಗ ಇವರಿಂದ ಸ್ಯಾಕ್ಸೋಪೆÇೀನ್ ವಾದನ, ಮಧ್ಯಾಹ್ನ ಗಂಟೆ 1.00 ಕ್ಕೆ ಓಜ ಸಾಹಿತ್ಯ ಕೂಟ, ಬಂಗ್ಲ ಮಂಜೇಶ್ವರ ಇವರಿಂದ

ಭಜನಾ ಸಂಕೀರ್ತನೆ, ಸಂಜೆ ಗಂಟೆ 7.00 ಕ್ಕೆ ಶ್ರೀ ಸದಾಶಿವ ದೇವರ ಉತ್ಸವ ಬಲಿ ಹೊರಡುವುದು, ವಸಂತ ಕಟ್ಟೆಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 30 ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಪರಮ ಶ್ರೀ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಪೂರ್ಣಾನಂದ ಪುರಿ ಮಹಾ ಸ್ವಾಮೀಜಿ ಶ್ರೀ ಕ್ಷೇತ್ರ ಶೈಲೇಶ್ವರ ಆಶೀವರ್ಚನ ನೀಡಲಿರುವರು. ಶ್ರೀ ಸದಾಶಿವ ಶೆಟ್ಟಿ ಕುಳೂರು ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಉದ್ಯಮಿ ದೀಪ ಪ್ರಜ್ವಲನೆಗೈಯಲಿರುವರು. ಗಣ್ಯರು ಉಪಸ್ಥಿತರಿರುವರು.  

ಮಾ.08 ರಂದು ಶನಿವಾರ ಬೆಳಿಗ್ಗೆ 8.30 ಕ್ಕೆ ಶ್ರೀ ಭೂತ ಬಲಿ ಉತ್ಸವ ಹೊರಡುವುದು, ದರ್ಶನ ಬಲಿ, ರಾಜಾಂಗಣ ಪ್ರಸಾದ, ಕಲಶಾಭಿಷೇಕ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries