ಕೊಟ್ಟಾಯಂ: ಸಿನಿಮಾದಲ್ಲಿ ನಟಿಸಲು ಬಂದಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ ಎರಟ್ಟುಪೆಟ್ಟ ಫಾಸ್ಟ್ ಟ್ರ್ಯಾಕ್ ಪೋಕ್ಸೋ ನ್ಯಾಯಾಲಯ 136 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1,97,500 ರೂ. ದಂಡ ವಿಧಿಸಿದೆ.
ಕಡಾಯಿನಿಕಾಡ್‍ನ ಕೊನೆಕಡವು ಮಡುಕ್ಕಕುಳಿಯ ರೆಗ್ಗಿ (52) ಶಿಕ್ಷೆಗೊಳಗಾದ ವ್ಯಕ್ತಿ. 2023 ರ ಮೇ 31 ರಂದು ಸಿನಿಮಾ ಚಿತ್ರೀಕರಣಕ್ಕಾಗಿ ಬಾಡಿಗೆಗೆ ಪಡೆದಿದ್ದ ಮನೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿದೆ. ತಿದಾನಡ್ ಎಸ್.ಎಚ್.ಒ. ಆಗಿದ್ದ ಪ್ರಶೋಕ್ ತನಿಖೆಯನ್ನು ಪೂರ್ಣಗೊಳಿಸಿ ಆರೋಪಪಟ್ಟಿಯನ್ನು ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಅಡ್ವಕೇಟ್. ಜೋಸ್ ಮ್ಯಾಥ್ಯೂ ನ್ಯಾಯಾಲಯಕ್ಕೆ ಹಾಜರಾಗಿದ್ದರು. ದಂಡ ಪಾವತಿಸಿ,ಸಂತ್ರಸ್ಥೆಗೆ 1,75,000 ರೂ.ಗಳನ್ನು ಪಾವತಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.






