HEALTH TIPS

ಆಂತರಿಕ ಕುಂದುಕೊರತೆ ಪರಿಹಾರ ಸಮಿತಿಗಳು ವಿಫಲ: ಮಹಿಳಾ ಪತ್ರಕರ್ತರ ಸಮಾವೇಶದಲ್ಲಿ ಕಳವಳ

ತಿರುವನಂತಪುರಂ: ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ತಡೆಗಟ್ಟಲು ರಚಿಸಲಾದ ಪಿಒಎಸ್‍ಎಚ್ ಕಾಯ್ದೆಯಡಿ ಆಂತರಿಕ ಕುಂದುಕೊರತೆ ಪರಿಹಾರ ಸಮಿತಿಗಳ ಕಾರ್ಯನಿರ್ವಹಣೆಯು ಹೆಚ್ಚಿನ ಮಾಧ್ಯಮ ಸಂಸ್ಥೆಗಳಲ್ಲಿ ವಿಫಲವಾಗಿದೆ ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಮಹಿಳಾ ಪತ್ರಕರ್ತರ ಸಮಾವೇಶದ ಹೇಳಿಕೆ ತಿಳಿಸಿದೆ.

ಅನೇಕ ಸಂಸ್ಥೆಗಳಲ್ಲಿರುವ ಮಹಿಳಾ ಪತ್ರಕರ್ತರಿಗೆ ಆಂತರಿಕ ಸಮಿತಿಗಳು ಅಸ್ತಿತ್ವದಲ್ಲಿವೆಯೇ ಎಂಬುದರ ಅರಿವಿಲ್ಲ ಎಂದು ಚರ್ಚೆಯಲ್ಲಿ ಭಾಗವಹಿಸುವವರು ಗಮನಸೆಳೆದರು. ಸರ್ಕಾರ ಮತ್ತು ಮಾಧ್ಯಮ ಸಂಸ್ಥೆಗಳು ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಗಮನ ಹರಿಸಬೇಕೆಂದು ವಿಚಾರ ಸಂಕಿರಣವು ಕರೆ ನೀಡಿತು.


ಮಹಿಳಾ ಪತ್ರಕರ್ತರಿಗೆ ಸಹಾಯಕವಾಗುವ ರೀತಿಯಲ್ಲಿ, ಕೆಲಸ ಮಾಡುವ ತಾಯಂದಿರಿಗಾಗಿ ರಾತ್ರಿಯೂ ಸಹ ಕಾರ್ಯನಿರ್ವಹಿಸುವ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರಿ ಮಟ್ಟದಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಅವಿವಾಹಿತ ಮಹಿಳಾ ಪತ್ರಕರ್ತರು ರಾತ್ರಿ ಕೆಲಸ ಮಾಡಿದ ನಂತರ ಉಳಿದುಕೊಳ್ಳಲು ಪ್ರತಿ ಜಿಲ್ಲೆಯಲ್ಲೂ ಹಾಸ್ಟೆಲ್ ಸೌಲಭ್ಯಗಳನ್ನು ಸ್ಥಾಪಿಸಬೇಕೆಂದು ಅವರು ಒತ್ತಾಯಿಸಿದರು.

ಪತ್ರಕರ್ತೆ ಮಾಯಾ ಶರ್ಮಾ ತಮ್ಮ ಮುಖ್ಯ ಭಾxಣದಲ್ಲಿ, ಸಮಾಜವು ವಿವಿಧ ವಿಷಯಗಳ ಕುರಿತು ಮಹಿಳೆಯರು ಎತ್ತುವ ಧ್ವನಿಗಳಿಗೆ ಹೆಚ್ಚಿನ ಗಮನ ನೀಡಬೇಕು ಮತ್ತು ಯಾವುದೇ ಕಾರಣಕ್ಕೂ ಮಹಿಳೆಯರನ್ನು ಕಡೆಗಣಿಸಬಾರದು ಎಂದು ಹೇಳಿದರು.

ಪತ್ರಕರ್ತೆ ರಾಣಾ ಅಯೂಬ್ ತಮ್ಮ ಮುಖ್ಯ ಭಾಷಣದಲ್ಲಿ, ಮಹಿಳಾ ಪತ್ರಕರ್ತರನ್ನು ಹಣೆಪಟ್ಟಿ ಕಟ್ಟುವುದು ಮತ್ತು ಅಂಚಿನಲ್ಲಿಡುವುದು ಪ್ರಜಾಪ್ರಭುತ್ವ ವಿರೋಧಿ ವಿಧಾನವಾಗಿದೆ ಎಂದು ಹೇಳಿದರು. ಕೆ. ಎಂ. ಬೀನಾ, ಸುಜಯಾ ಪಾರ್ವತಿ, ಕೆ. ಪಿ. ಸಫಿನಾ, ವಿ. ಪ. ರೆಜಿನಾ, ನೀತು ಸರಳಾ ರಘು ಕುಮಾರ್ ಮತ್ತು ಇತರರು ಚರ್ಚೆಯಲ್ಲಿ ಭಾಗವಹಿಸಿದ್ದರು. 

ನ್ಯೂಸ್ ಮಿನಿಟ್ ನ ಹರಿತಾ ಜಾನ್ ಮಾಡರೇಟರ್ ಆಗಿದ್ದರು. ಮಾಧ್ಯಮ ಸಂಸ್ಥೆಗಳು ಪೋಶ್ ಕಾಯ್ದೆಯನ್ನು ಜಾರಿಗೆ ತರಲು ವಿಫಲವಾದರೆ ಕಾನೂನು ಕ್ರಮಗಳನ್ನು ಬಲಪಡಿಸುವಂತೆಯೂ ವಿಚಾರ ಸಂಕಿರಣವು ಕರೆ ನೀಡಿತು.

ಕೇರಳದ ಮೊದಲ ಮಹಿಳಾ ಪತ್ರಕರ್ತೆ ಎಂ.ಹೇಲ್ ಬೀವಿ ಅವರ ಕುರಿತಾದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಎಸ್ ಹರಿಕಿಶೋರ್, ನಿರ್ದೇಶಕ ಟಿ ವಿ ಸುಭಾಷ್, ಕೇರಳ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಆರ್ ಎಸ್ ಬಾಬು, ಕೇರಳ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಕೆ ಪಿ ರೇಜಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಎಡಪ್ಪಲ್, ಉಪಾಧ್ಯಕ್ಷೆ ಪಿ ಎಂ ಕೃಪಾ, ರಾಜ್ಯ ಕಾರ್ಯದರ್ಶಿ ಬಿನಿತಾ ದೇವಸಿ ಮತ್ತು ತಿರುವನಂತಪುರಂ ಜಿಲ್ಲಾ ಕಾರ್ಯದರ್ಶಿ ಅನುಪಮಾ ಜಿ ನಾಯರ್ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries