ಕಾಸರಗೋಡು: ಮೂರು ದಿನಗಳ ಕಾಲ ನಡೆಯುವ ತ್ಯಾಗರಾಜ-ಪುರಂದರ ದಾಸ ಸಂಗೀತೋತ್ಸವವನ್ನು ಕಾಞಂಗಾಡಿನಲ್ಲಿ ಟಿ.ಪಿ.ಶ್ರೀನಿವಾಸನ್ ಶನಿವಾರ ದೀಪಬೆಳಗಿಸಿ ಉದ್ಘಾಟಿಸಿದರು. ಸಂಗೀತ ಸಭಾದ ಅಧ್ಯಕ್ಷ ಬಿ.ಆರ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಪಿ. ಜಯಚಂದ್ರನ್, ವಿ.ಕಮಲಾಕರ ರಾವ್ ಪಾಲ್ಗೊಂಡಿದ್ದರು.
ಕಾಞಂಗಾಡು ಟಿ.ಪಿ. ಶ್ರೀನಿವಾಸನ್ ಅವರು ಸಂಗೀತ ಸಭಾದ ಸ್ಮರಣಿಕೆಯನ್ನು ಬಿ.ಜಿ.ಈಶ್ವರ ಭಟ್ ಅವರಿಗೆ ಹಸ್ತಾಂತರಿಸಿ ಉದ್ಘಾಟಿಸಿದರು. ಇ.ವಿ.ಜಯಕೃಷ್ಣನ್, ವಿ.ಸುರೇಶ್ ಮೋಹನ್, ಎಂ.ಶ್ರೀಕಂಠನ್ ನಾಯರ್, ವಿದುಷಿ ಉಷಾ ಈಶ್ವರ ಭಟ್, ಪಿ.ವಿ.ಜಗದೀಶನ್ ಮಾತನಾಡಿದರು. ಕಳೆದ 37 ವರ್ಷಗಳಿಂದ ಸಂಗೀತ ಸಭಾ ತ್ಯಾಗರಾಜ ಆರಾಧನೋತ್ಸವವನ್ನು ನಡೆಸಿಕೊಂಡು ಬರುತ್ತಿದೆ.




.jpg)

