ಬದಿಯಡ್ಕ: ಗ್ರಾಮೀಣ ಪ್ರದೇಶವಾದ ಪಡ್ರೆ ಗ್ರಾಮದ ಏತಡ್ಕ ಶ್ರೀಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ 8.48ರ ಮೀನಲಗ್ನ ಸುಮೂರ್ತದಲ್ಲಿ ಋತ್ವಿಗಣಗಳ ಸಮ್ಮುಖ ಶ್ರೀ ದೇವರಿಗೆ ಸಹಸ್ರಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ಸಹಸ್ರಾರು ಭಜನಕರ ಸಮ್ಮುಖದಲ್ಲಿ ಸಂಪನ್ನಗೊಂಡಿತು. ಪೂರ್ವಾಹ್ನ 108 ತೆಂಗಿನಕಾಯಿ ಗಣಪತಿ ಹೋಮ, ಪ್ರತಿಷ್ಠಾಪಾಣಿ, ಶ್ರೀದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೆಕ, ಪ್ರತಿಷ್ಠಾಬಲಿ, ಮಹಾಪೂಜೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಿತು.
ಮಧ್ಯಾಹ್ನ 12.30ಕ್ಕೆ ಪರಮಪೂಜ್ಯ ಶ್ರೀಮಜ್ಜಗದ್ಗುರು ಶ್ರೀರಾಮಚಂದ್ರಾಪುರ ಮಠದ ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅವರ ಆಗಮನ, ಸಕಲ ಗೌರವಾಧಾರಗಳೊಂದಿಗೆ ಪೂರ್ಣಕುಂಭ ಸ್ವಾಗತ, ಶೋಭಾಯಾತ್ರೆ, ಶಿವಸಂದೇಶ ಸಭಾದಲ್ಲಿ ಶ್ರೀಗಳಿಂದ ಆಶೀರ್ವಚನ ನಡೆಯಿತು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ದಿವ್ಯ ಉಪಸ್ಥಿತರಿದ್ದರು. . ವೇದಮೂರ್ತಿ ಶಿವಶಂಕರ ಭಟ್ ಪಳ್ಳತ್ತಡ್ಕ, ವಾಸ್ತುತಜ್ಞ ಕೆ.ಎನ್. ಭಟ್ ಬೆಳ್ಳಿಗೆ, ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಉಪಸ್ಥಿತರಿದ್ದರು. ಖ್ಯಾತ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಲಾರ್ಪಣಮ್ ನಟರಾಜ ವೇದಿಕೆಯಲ್ಲಿ ಪೂರ್ವಾಹ್ನ 9ರಿಂದ 10.30ರ ವರೆಗೆ ಸಪ್ತಸ್ವರ ಸಂಗೀತ ಶಾಲೆ ಪುತ್ತೂರು ಇವರಿಂದ ಭಕ್ತಿಸಂಗೀತ, 10.30ರಿಂದ 11.30 ಸಾಮೂಹಿಕ ರುದ್ರ ಪಾರಾಯಣ ಸೇವೆ, ಸಂಜೆ 4ರಿಂದ ಶಾಸ್ತ್ರೀಯ ಸಂಗೀತ ಮತ್ತು ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ಇದರ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿ ಡಾ.ವೈ.ಸುಬ್ರಾಯ ಭಟ್ ಪುತ್ತೂರು, ಗೌರವ ಉಪಾಧ್ಯಕ್ಷ ವೈ.ಶಂಕರ ಭಟ್ ಒಕ್ಕೆತ್ತೂರು ವಿಟ್ಲ, ಅಧ್ಯಕ್ಷ ವೈ.ಶ್ಯಾಮ ಭಟ್-ಉಷಾ ಶ್ಯಾಮ ಭಟ್ ಬೆಂಗಳೂರು, ಉಪಾಧ್ಯಕ್ಷ ಪತ್ತಡ್ಕ ಗಣಪತಿ ಭಟ್, ಡಾ,ವೇಣುಗೋಪಾಲ ಕಳೆಯತ್ತೋಡಿ, ಕಾರ್ಯದರ್ಶಿ ಡಾ.ವೈ.ಎಚ್.ಪ್ರಕಾಶ್ ಏತಡ್ಕ, ಸಹ ಕಾರ್ಯದರ್ಶಿ ವೈ.ಶ್ರೀಧರ ಭಟ್ ಏತಡ್ಕ, ಖಜಾಂಜಿ ವೈ.ವಿ.ಸುಬ್ರಹ್ಮಣ್ಯ ಭಟ್ ಏತಡ್ಕ, ಜೊತೆ ಕಾರ್ಯದರ್ಶಿ ಕೆ.ಕೆ.ಬಾಲಕೃಷ್ಣ ಕುಂಡಾಪು, ಎ.ಸಿ.ಸುಮಿತ್ ರಾಜ್ ಈಳಂತೋಡಿ, ಸಂಚಾಲಕ ಚಂದ್ರಶೇಖರ ಏತಡ್ಕ-ಡಾ.ಅನ್ನಪೂರ್ಣೇಸ್ವರಿ ಏತಡ್ಕ ದಂಪತಿಗಳು, ಸಹ ಸಂಚಾಲಕ ಡಾ.ವೈ.ವಿ.ಕೃಷ್ಣಮೂರ್ತಿ ಬದಿಯಡ್ಕ ಮೊದಲಾದವರು ಫೆ.11 ರಿಂದ ಮೊದಲ್ಗೊಂಡು ನಡೆಯುತ್ತಿದ್ದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ನೇತೃತ್ವ ವಹಿಸಿದ್ದರು.





.jpg)

