ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಭಾನುವಾರ ಸಂಜೆ ಕಿಳಿಂಗಾರು ಸಾಯಿ ನಿಲಯಕ್ಕೆ ಆಗಮಿಸಿದರು. ಸಾಯಿರಾಂ ಕೃಷ್ಣ ಭಟ್ ದಂಪತಿಗಳು ಕುಟುಂಬ ಸಹಿತ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಬರಮಾಡಿಕೊಂಡು ಸ್ವಾಗತಿಸಿ ಧೂಳೀ ಪಾದುಕಾ ಪೂಜೆ ನೆರವೇರಿಸಿದರು.
ನೀರ್ಚಾಲು ವಲಯದ ಗುರಿಕಾರರು, ಕಾರ್ಯಕರ್ತರು, ಶ್ರೀಮಠದ ಶಿಷ್ಯವೃಂದದವರು, ಮಂಡಲ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಇಂದು ಫೆ.17 ಸೋಮವಾರ ಬೆಳಗ್ಗೆ 10 ಕ್ಕೆ ಶ್ರೀಪೂಜೆ, ಭಿಕ್ಷಾಸೇವೆ, 10.30ರಿಂದ ಭಕ್ತಿಗಾನ ಸುಧಾ ವಿದ್ವಾನ್ ಶಶಿಧರ ಕೋಟೆ ಮತ್ತು ಬಳಗದವರಿಂದ, 12.30ಕ್ಕೆ ಶ್ರೀಗಳು ಪೀಠಕ್ಕೆ ಆಗಮನ, ಭಿಕ್ಷಾ ಮಂಗಳಾರತಿ, ಫಲಸಮರ್ಪಣೆ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಗೌರವಾರ್ಪಣೆ, ಸ್ವ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ವಿತರಣೆ, ಶ್ರೀಮಠದ ವಿವಿಧ ಯೋಜನೆಗಳಿಗೆ ಸಮರ್ಪಣೆ, ಆಶೀರ್ವಚನ, ಮಂತ್ರಾಕ್ಷತೆ ನಡೆಯಲಿದೆ.





