ಕಾಸರಗೋಡು: ಹದಿಮೂರರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದ ಅಪರಾಧಿ, ತಳಿಪರಂಬ ಚಪ್ಪಾರಕಡವು ನಿವಾಸಿ ಬಿನು ಪಿ.ಪಿ ಯಾನೆ ವೆಳಿಚ್ಚಂ ಬಿನು(45) ಎಂಬಾತನಿಗೆ ಕಾಸರಗೋಡು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ನ್ಯಾಯಾಧೀಶ ರಾಮು ರಮೇಶ್ಚಂದ್ರ ಭಾನು ವಿವಿಧ ಸೆಕ್ಷನ್‍ಗಳಲ್ಲಾಗಿ 85ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 3.25ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಆದೂರು ಠಾಣೆ ವ್ಯಾಪ್ತಿಯ ಬಾಲಕಿಗೆ 2019ರ ಜೂ. 3ರಂದು ಆಕೆಯ ಮನೆಯಲ್ಲಿ ಹಾಗೂ 2019ರ ಡಿಸೆಂಬರ್ 14ರಂದು ಇನ್ನೊಂದು ಮನೆಯಲ್ಲಿ ಕಿರುಕುಳ ನೀಡಿರುವ ಬಗ್ಗೆ ಈತನ ವಿರುದ್ಧ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಮಡಿದ್ದರು. ಆದೂರು ಪೊಲೀಸ್ ಠಾಣೆ ಅಂದಿನ ಇನ್ಸ್‍ಪೆಕ್ಟರ್ ಪ್ರೇಮ್‍ಸದನನ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.




