ಕಾಸರಗೋಡು: ತ್ರಿಕರಿಪುರ ಬಸ್ ನಿಲ್ದಾಣ ಸನಿಹ ಮಲಿನ ನೀರನ್ನು ಸಾರ್ವಜನಿಕ ರಸ್ತೆ ಹಾಗೂ ಆಸುಪಾಸಿನ ಗದ್ದೆಗೆ ಬಿಡುತ್ತಿದ್ದ ಹೊಟೇಲ್ ಮಾಲೀಕಗೆ ಸ್ಥಳೀಯಾಡಳಿತ ಸಂಸ್ಥೆಯ ಜಿಲ್ಲಾ ಎನ್‍ಫೋರ್ಸ್‍ಮೆಂಟ್ ವಿಭಾಗ 10ಸಾವಿರ ರೂ. ದಂಡ ವಿಧೀಸಿದೆ.
ಹೋಟೆಲ್‍ನಿಂದ ಹೊರ ಹರಿಯುವ ನೀರನ್ನು ವೈಜ್ಞಾನಿಕರೀತಿಯಲ್ಲಿ ಸಂಗ್ರಹಿಸುವ ನಿಟ್ಟಿನಲ್ಲಿ ಸೂಕ್ತ ಹೊಂಡ ನಿರ್ಮಿಸುವುದರ ಜತೆಗೆ, ಬಯಲುಪ್ರದೇಶಕ್ಕೆ ಮಲಿನನೀರು ಹರಿಯಲು ಅಳವಡಿಸಿದ್ದ ಪೈಪ್‍ಲೈನ್ ವಿಚ್ಛೇದಿಸುವಂತೆಯೂ ಸೂಚಿಸಲಾಗಿದೆ. ಆದೇಶ ಪಾಲಿಸದಿದ್ದಲ್ಲಿ ಹೋಟೆಲ್ ಕಾರ್ಯಾಚರಣೆ ಸ್ಥಗಿತಗೊಳಿಸಲು ನೋಟೀಸು ನೀಡುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಸ್ಥಳೀಯ ಪಂಚಾಯಿತಿಗೆ ಸೂಚಿಸಲಾಯಿತು.
ಇನ್ನೊಂದು ಪ್ರಕರಣದಲ್ಲಿ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಕಲ್ಪಿಸದ ಉದುಮ ಕ್ವಾಟ್ರಸ್ ಒಂದರ ಮಾಲೀಕಗೆ 5000 ರೂ. ದಂಡ ವಿಧಿಸಲಾಗಿದೆ. ಪಕ್ಯಾರದಲ್ಲಿ ಕಾರ್ಯಾಚರಿಸುವ ಕ್ವಾಟ್ರಸ್‍ನಲ್ಲಿ ಸಂಗ್ರಹಗೊಳ್ಳುವ ಕಸ ಹಾಗೂ ಇತರ ತ್ಯಾಜ್ಯವನ್ನು ಅವೈಜ್ಞಾನಿಕರ ರೀತಿಯಲ್ಲಿ ಎಸೆದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಎನ್‍ಫೋರ್ಸ್‍ಮೆಂಟ್ ಅಧಿಕಾರಿ ಕೆ.ವಿ.ಮುಹಮ್ಮದ್ ಮದನಿ, ಹೆಲ್ತ್ ಇನ್ಸ್ ಪೆಕ್ಟರ್ ಸುಪ್ರಿಯಾ ಎಂ, ಸ್ಕ್ವಾಡ್ ಸದಸ್ಯರಾದ ಫಾಝಿಲ್ ಇ.ಕೆ, ವಿಪಿನ್ ಕುಮಾರ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.




