ಕುಂಬಳೆ: ಕುಂಬಳೆಗೆ ಸಮೀಪದ ಮುಜುಂಗಾವು ಕಾವು ಕನ್ನಿಮೂಲೆಯಲ್ಲಿರುವ ಶ್ರೀ ಕೊರಗಜ್ಜ ಮತ್ತು ಕಲ್ಲುರ್ಟಿ ದೈವಸ್ಥಾನದ ವಾರ್ಷಿಕೋತ್ಸವದ ಪ್ರಯುಕ್ತ ಮಜಲು ಉದಯಶಂಕರ ಭಟ್ ಇವರ ನಿರ್ದೇಶನದಲ್ಲಿ ವಿಶಾಲ ಯಕ್ಷ ಬಳಗ ನಂದಳಿಕೆ ಕಾರ್ಕಳ ಇವರಿಂದ ಮಾ.8 ರಂದು ಶನಿವಾರ ಲಡಾಯಿತ ಬೂಳ್ಯ ಎಂಬ ತುಳು ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

