HEALTH TIPS

ಹೊಸಂಗಡಿ ಹೈಟೆಕ್ ಸ್ಟುಡಿಯೊ ಮ್ಹಾಲಕ ಚಿದಾನಂದ ಅರಿಬೈಲು ನಿಧನ

ಮಂಜೇಶ್ವರ: ಹೊಸಂಗಡಿಯಲ್ಲಿ ಕಳೆದ 30 ವರ್ಷಗಳಿಂದ ಕಾರ್ಯಚರಿಸುತ್ತಿದ್ದ "ಹೈಟೆಕ್ ಡಿಜಿಟಲ್ ಸ್ಟುಡಿಯೋ" ದ ಮ್ಹಾಲಕರಾದ ಹಿರಿಯ ಛಾಯಾಗ್ರಾಹಕ ಚಿದಾನಂದ ಅರಿಬೈಲು (57) ಶುಕ್ರವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮುರತ್ತಣೆ ಬಳಿಯ ಅರಿಬೈಲು ತೋಟದಮೂಲೆ ನಿವಾಸಿಯಾಗಿರುವ ಸಂಜೀವ ಮಡಿವಾಳ - ಪದ್ಮಾವತಿ ದಂಪತಿಗಳ ಪುತ್ರನಾಗಿರುವ ಚಿದಾನಂದ ಅರಿಬೈಲು ಅವರು ಪತ್ನಿ: ರೋಹಿಣಿ, ಮಕ್ಕಳಾದ: ಸಾತ್ವಿಕ್, ಸಾಗರ್ ಹಾಗೂ ಏಕ ಸಹೋದರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಸಹೋದರ ಮಂಜೇಶ್ವರ ಎಸ್. ಎ.ಟಿ ಶಾಲಾ ಅಧ್ಯಾಪಕರಾದ ಶಿವಾನಂದರವರು ಈ ಹಿಂದೆ ನಿಧನರಾಗಿದ್ದರು.


ಹೊಸಂಗಡಿ ಮೇಘ ಟವರ್ ನಲ್ಲಿ ಕಾರ್ಯಾಚರಿಸುತ್ತಿದ್ದ "ಹೈಟೆಕ್ ಡಿಜಿಟಲ್ ಸ್ಟುಡಿಯೋ" ಚಿದಣ್ಣ ನ ಸ್ಟುಡಿಯೋ ಎಂದೇ ಮಂಜೇಶ್ವರದ ಜನತೆಯ ಪರಿಚಿತ ಹೆಸರಾಗಿತ್ತು. ಕಳೆದ ಎರಡು ವರ್ಷಗಳ ಹಿಂದೆ ಅಸೌಖ್ಯದಿಂದ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಈ ವೇಳೆ ಇತ್ತಿಚಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ನಿನ್ನೆ ರಾತ್ರಿ ನಿಧನರಾದರು. ಮೃತರ ಅಂತ್ಯಕ್ರಿಯೆ ಇಂದು ಅಪರಾಹ್ನ 12 ಗಂಟೆಗೆ ಮನೆ ಪರಿಸರದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.  ಹಿರಿಯ ಛಾಯಾಗ್ರಾಹಕರಾದ ಚಿದಾನಂದ ಅರಿಬೈಲುರವರು ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ರಂಗಗಳಲ್ಲೂ ಸಕ್ರಿಯರಾಗಿದ್ದು, ಅರಿಬೈಲು ಶ್ರೀ ನಾಗಬ್ರಹ್ಮ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿದ್ದರು. ಕೇರಳ ವ್ಯಾಪಾರಿ ವ್ಯವಸಾಯ ಏಕೋಪನಾ ಸಮಿತಿ ಮಂಜೇಶ್ವರ ಘಟಕದ ಸದಸ್ಯ, ಕೇರಳ ಪೋಟೋ ಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) ಸದಸ್ಯರಾಗಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries