ಮುಳ್ಳೇರಿಯ: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಅಂಗವಾಗಿ ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ಭಾನುವಾರ ಮುಳಿಯಾರು ಬಯಲು ಪ್ರಾದೇಶಿಕ ಸಮಿತಿ ರೂಪೀಕರಣ ಸಭೆ ಜರಗಿತು.
ಮಾಧವನ್ ಆಲುಂಗಾಲು ಅಧ್ಯಕ್ಷತೆ ವಹಿಸಿದ್ದರು. ಸೀತಾರಾಮ ಬಳ್ಳುಳ್ಳಾಯ ಶುಭಾಶಂಸನೆಗೈದರು. ವಾಮನ ಆಚಾರ್ಯ ಸಾಂದರ್ಭಿಕ ಮಾತುಗಳನ್ನಾಡಿದರು. ರಾಜನ್ ಮುಳಿಯಾರು ದಿಕ್ಸೂಚೀ ಮಾತುಗಳನ್ನಾಡಿದರು. ಗೋವಿಂದ ಬಳ್ಳಮೂಲೆ ಸಮಿತಿಯ ಕಾರ್ಯಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು.
ಸಭೆಯಲ್ಲಿ ಸಮಿತಿಯ ಕಾರ್ಯಕಾರಿ ಸಮಿತಿ ರೂಪೀಕರಿಸಲಾಯಿತು. ಮಾಧವನ್ ಆಲುಂಗಾಲು ಅಧ್ಯಕ್ಷರು, ಸುಧಿ ಮುಳಿಯಾರು ಕಾರ್ಯದರ್ಶಿ, ಮನೋಜ್ ಕೋಶಾಧಿಕಾರಿ, ಮಾತೃ ಸಮಿತಿ ಅಧ್ಯಕ್ಷೆ ನಿಶಾ ನರಿಕ್ಕೋಳು, ಮಾತೃ ಸಮಿತಿ ಕಾರ್ಯದರ್ಶಿ ಶೈಲಜಾ ಮತ್ತು ಇತರ ಸದಸ್ಯರುಗಳನ್ನು ಸಮಿತಿಗೆ ಆಯ್ಕೆ ಮಾಡಲಾಯಿತು.
ಸುಧಿ ಮುಳಿಯಾರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸಭೆಯಲ್ಲಿ ನಿವೇದನಾ ಪತ್ರ ಮತ್ತು ರಶೀದಿ ಪುಸ್ತಕಗಳನ್ನು ಸಮಿತಿಯವರಿಗೆ ಹಸ್ತಾ0ತರಿಸಲಾಯಿತು. ಆಯ್ಕೆ ಮಾಡಲಾದ ಪದಾಧಿಕಾರಿಗಳು ಜವಾಬ್ದಾರಿ ಸ್ವೀಕರಿಸಿದ ಬಳಿಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.




.jpg)
.jpg)

