ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಹಮ್ಮಿಕೊಂಡ ಶ್ರೀನಿಧಿ ಕೂಪನ್‍ನ ಬಂಪರ್ ಬಹುಮಾನವಾದ ಮಾರುತಿ ಎಸ್ಪ್ರೆಸ್ಸೊ ಕಾರನ್ನು ವಿಜೇತರಿಗೆ ಹಸ್ತಾಂತರಿಸಲಾಯಿತು.
ಬಹುಮಾನದ ಪ್ರಾಯೋಜಕರಾದ ಉದ್ಯಮಿ ಎಡೆಕ್ಕಾನ ಮಹಾಬಲೇಶ್ವರ ಭಟ್ ದಂಪತಿಗಳು ವಿಜೇತರಾದ ಪುರುಷೋತ್ತಮ ಕಾರ್ಮಾರು ಇವರಿಗೆ ಶ್ರೀಕ್ಷೇತ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಮಧೂರು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಗಣೇಶಕೃಷ್ಣ ಅಳಕ್ಕೆ, ನರಸಿಂಹ ಭಟ್ ಕಾರ್ಮಾರು ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.




.jpg)
