ಸಮರಸ ಚಿತ್ರಸುದ್ದಿ: ಬದಿಯಡ್ಕ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯವು ನಡೆಸಿದ ಜುಲೈ -ಆಗಸ್ಟ್ ಕರ್ನಾಟಕ ತಾಳವಾದ್ಯ ಸೀನಿಯರ್ ವಿಭಾಗದಲ್ಲಿ ಶ್ರೀಚರಣ ಅಮೈಕಟ್ಟೆ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾನೆ. ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಇವರ ಶಿಷ್ಯ, ಕೆ ನರಸಿಂಹ ಭಟ್ ಮತ್ತು ಸಂಧ್ಯಾ ಎನ್ ಭಟ್ ಇವರ ಸುಪುತ್ರ. ಮಹಾಲಸಾ ಕಾಲೇಜು ಆಫ್ ಆರ್ಟ್ ಇಲ್ಲಿ 4ನೇ ವರ್ಷ ವ್ಯಾಸಂಗವನ್ನು ಮಾಡುತ್ತಿದ್ದಾರೆ.





