ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಮೂರು ದಿನಗಳ ಜೀವನ ಕೌಶಲ್ಯ ತರಬೇತಿ ಶಿಬಿರ ಬುಧವಾರ ಆರಂಭವಾಯಿತು. ಪುತ್ತಿಗೆ ಗ್ರಾಮ ಪಂಚಾಯತಿ ಸದಸ್ಯೆ ಅನಿತಾಶ್ರೀ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಬು ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾತೃ ಸಂಘದ ಅಧ್ಯಕ್ಷೆ ಆಯಿಷತ್ ಅಸೀದ ಶುಭಾಶಂಸನೆಗೈದರು. ಸಂಪನ್ಮೂಲ ವ್ಯಕ್ತಿಗಳಾದ ನಿರ್ಮಲ್ ಕುಮಾರ್, ಯತೀಶ್ ಬಲ್ಲಾಳ್, ಶ್ರೀಲತ ತರಗತಿ ನಡೆಸಿಕೊಟ್ಟರು. ಜಿಲ್ಲಾ ಯೋಜನಾ ಸಹಾಯಕಿ ರಮ್ಯಶ್ರೀ ವೈ ಶಿಬಿರದ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕಿ ಸುನೀತ ಎ ಸ್ವಾಗತಿಸಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಕಿರಣ್ ಕೆ ವಂದಿಸಿದರು. ರಾಧಾಕೃಷ್ಣ ಬಂಬ್ರಾಣ ನಿರೂಪಿಸಿದರು.







