ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಕುಂಟರು ಪಡ್ಯತ್ತಡ್ಕದಲ್ಲಿ ತೋಟದ ಕೆಲಸದ ಮಧ್ಯೆ ಕೃಷಿಕ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ತೆಕ್ಕೇಕೆರೆ ಮೇಲತ್ತ್ ತರವಾಡಿನ ಸದಸ್ಯ ದಾಮೋದರನ್ ನಾಯರ್(72)ಮೃತಪಟ್ಟವರು.
ತಮ್ಮ ಅಡಕೆ ತೋಟದಲ್ಲಿ ಶುಚೀಕರಣ ಕೆಲಸ ನಡೆಸುತ್ತಿದ್ದ ಸಂದರ್ಭ ಆಯತಪ್ಪಿ ಕೆರೆಗೆ ಬಿದ್ದ ಇವರನ್ನು ಜತೆಗಿದ್ದ ಇವರ ಪುತ್ರ ಹಾಗೂ ಸ್ಥಳೀಯರು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಕೆರೆಯ ನೀರಲ್ಲಿದ್ದ ಕೆಸರಿನಲ್ಲಿ ಇವರ ಶರೀರ ಹೂತುಕೊಂಡ ಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ತಕ್ಷಣ ಮೇಲಕ್ಕೆತ್ತಲು ಸಾಧ್ಯವಾಘಿರಲಿಲ್ಲ.ಆದೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




