ಮಂಜೇಶ್ವರ: ವರ್ಕಾಡಿ ನರಿಂಗಾನ ಶಾಂತಿಪಳಿಕೆ ಶ್ರೀ ಮಹಮ್ಮಾಯಿ ದೇವಸ್ಥಾನದ ಶ್ರೀ ಮಹಮ್ಮಾಯಿ ದೇವಿಯ ಎರಡನೇ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವ ಹಾಗೂ ಶ್ರೀ ದುರ್ಗಾನಮಸ್ಕಾರ ಪೂಜೆ ಫೆ. 27ರಂದು ಜರುಗಲಿದೆ. ತಂತ್ರಿವರ್ಯ ಬ್ರಹ್ಮಶ್ರೀ ವರ್ಕಾಡಿ ಹೊಸಮನೆ ರಾಜೇಶ್‍ತಾಳಿತ್ತಾಯ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.
ಬೆಳಗ್ಗೆ 9ಕ್ಕೆ ಸಾಮೂಹಿಕ ಪ್ರಾರ್ಥನೆ, ಹೋಮ, ಕಲಶಾಭಿಷೇಕ, ಸಂಜೆ 5ರಿಂದ ಭಜನಾ ಸಂಕೀರ್ತನೆ, 6ಕ್ಕೆ ಶ್ರೀ ದುರ್ಗಾನಮಸ್ಕಾರ ಪೂಜೆ ನಡೆಯಲಿರುವುದು.




