ಕಾಸರಗೋಡು: ಬಹುಭಾಷೆಯನ್ನೊಳಗೊಂಡ ಸಮಾಜದಿಂದ ಭಾಷೆಗಳ ಉಳಿವು ಸಾಧ್ಯ ಎಂಬುದಾಗಿ ಖ್ಯಾತ ವಿಮರ್ಶಕ ಪೆÇ್ರ. ಇ.ವಿ. ರಾಮಕೃಷ್ಣನ್ ತಿಳಿಸಿದ್ದಾರೆ. ಅವರು ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಅಂಗವಾಗಿ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಮಲಯಾಳ ವಿಭಾಗ ಮಾತೃಭಾಷೆ ಮತ್ತು ಕಾವ್ಯ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಬಹುಭಾಷಾವಾದ ಮತ್ತು ಭಾಷೆಗಳ ನಡುವಿನ ಸಂಪರ್ಕದಿಂದ ಹೆಚ್ಚಿನ ಸಾಧ್ಯತೆಗಳನ್ನು ತೆರೆದಿಡಲು ಸಾಧ್ಯ. ಭಾರತೀಯ ಭಾಷೆಗಳು ಸಂಪರ್ಕ ಭಾಷೆಗಳ ಮೂಲಕ ಬೆಳೆದಿರುವುದಾಗಿ ತಿಳಿಸಿದರು. ತುಲನಾತ್ಮಕ ಭಾಷಾ ಅಧ್ಯಯನ ವಿಭಾಗದ ಡೀನ್ ಪೆÇ್ರ. ಜೋಸೆಫ್ ಕೋಯಿಪಲ್ಲಿ ಅಧ್ಯಕ್ಷತೆ ವಹಿಸಿದ್ದರು. ಪೆÇ್ರ. ರಾಜೇಂದ್ರನ್ ಎಡತುಮ್ ಅವರು ಕಾವ್ಯದ ಮೂಲಕ ಶಿಕ್ಷಣ ಎಂಬ ವಿಷಯದ ಕುರಿತು ಮತ್ತು ಡಾ.ಶೀಬಾ ರಾಜಿ ಕುಮಾರ್ ಕಾವ್ಯದ ಅನುವಾದ ವಿಷಯದ ಕುರಿತು ಪ್ರಬಂಧ ಮಂಡಿಸಿದರು. ಮಲಯಾಳ ವಿಭಾಗದ ಅಧ್ಯಕ್ಷ ಡಾ.ಆರ್. ಚಂದ್ರಬೋಸ್, ರೇಷ್ಮಾ ಕೆ.ವಿ. ಉಪಸ್ಥಿತರಿದ್ದರು.



