ಕಾಸರಗೋಡು: ಕಾಂಗ್ರೆಸ್ ಕಾಸರಗೋಡು ಮಂಡಲ ಸಮಿತಿಯ ಆಶ್ರಯದಲ್ಲಿ ಭೂಕಂದಾಯ ಹೆಚ್ಚಳ ಸೇರಿದಂತೆ ಜನವಿರೋಧಿ ಕ್ರಮಗಳ ವಿರುದ್ಧ ಕಾಸರಗೋಡು ಗ್ರಾಮಾಧಿಕರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು. ಕೆಪಿಸಿಸಿ ಕಾರ್ಯದರ್ಶಿ ಕೆ. ನೀಲಕಂದನ್ ಧರಣಿ ಉದ್ಘಾಟಿಸಿದರು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಾಜಿದ್ ಕಂದಂ ಅಧ್ಯಕ್ಷತೆ ವಹಿಸಿದ್ದರು.
ಜಿ ನಾರಾಯಣನ್, ಚಂದ್ರಶೇಖರನ್, ಕೆ. ಟಿ. ಸುಭಾಷ್ ನಾರಾಯಣನ್, ಶ್ರೀಧರನ್, ಜಯರಾಮನ್ ನೆಲ್ಲಿಕುನ್ನು, ಶಫಿ ಆಣಂಗೂರ್, ನಿಯಾಜ್ ಜಾಸ್ಮನ್, ಸೂಫಿ, ರಜಾಕ್, ಉಷಾ, ಶಶಿಕಲಾ ನೆಲ್ಲಿಕುನ್ನು, ಮುಕುಂದನ್, ಅಬೂಬಕರ್ ತುರುತ್ತಿ, ಹರೀಂದ್ರನ್ ಎರಕೋಡನ್, ನಿಯಾಸ್ ವೆಲ್‍ಕಮ್, ಬಾಲಕೃಷ್ಣನ್ ತಾಳಿಪದವು ಉಪಸ್ಥಿತರಿದ್ದರು.
ಮಂಡಲ ಬ್ಲಾಕ್ ಉಪಾಧ್ಯಕ್ಷ ಎ. ಶಾಹುಲ್ ಹಮೀದ್ ಸ್ವಾಗತಿಸಿದರು. ಮಂಡಲ ಉಪಾಧ್ಯಕ್ಷ ರೂಪೇಶ್ ಕಡಪುರ ವಂದಿಸಿದರು.


