ಕಾಸರಗೋಡು: ವಿದ್ಯಾನಗರದಲ್ಲಿರುವ ನಗರಸಭಾ ಸ್ಟೇಡಿಯಂ ರಸ್ತೆಗೆ ಕ್ರಿಕೆಟ್ ದಿಗ್ಗಜ ಸುನಿಲ್ ಗೌಸ್ಕರ್ ಅವರ ಹೆಸರನ್ನಿರಿಸಲಾಗಿದ್ದು, ನಾಮಕರಣ ಘೋಷಣೆಯನ್ನು ಫೆ. 21ರಂದು ಸಂಜೆ 4ಕ್ಕೆ ನಡೆಯುವ ಸಮಾರಂಭದಲ್ಲಿ ಸುನಿಲ್ ಗಾವಸ್ಕರ್ ನಡೆಸಲಿದ್ದಾರೆ.
ನಂತರ ಕಾಸರಗೋಡು ನಗರಸಭೆ ವತಿಯಿಂದ ವಿದ್ಯಾನಗರ ಸ್ಟೇಡಿಯಂ ವಠಾರದಿಂದ ಚೆಟ್ಟುಂಗುಳಿ ವರೆಗೆ ತೆರೆದ ವಾಹನದಲ್ಲಿ ಸುನಿಲ್‍ಗಾವಸ್ಕರ್ ಅವರನ್ನು ಮೆರವಣಿಗೆ ಮೂಲಕ ಕರೆದೊಯ್ಯಲಾಗುವುದು. ನಂತರ ನಡೆಯುವ ಸಮಾರಂಭದಲ್ಲಿ ಸುನಿಲ್ ಗಾವಸ್ಕರ್ ಭಾಗವಹಿಸಲಿದ್ದಾರೆ.






