ಕಾಸರಗೋಡು: ಹೆರಿಗೆ ನಂತರ ನವಜಾತ ಶಿಶು ಸಾವಿಗೀಡಾಗಿದ್ದು, ಅತಿಯಾದ ರಕ್ತಸ್ರಾವದಿಂದ ತಾಯಿಯೂ ಮೃತಪಟ್ಟ ಘಟನೆ ಬೇಕಲದಲ್ಲಿ ನಡೆದಿದೆ. ಇಲ್ಲಿನ ಕೀಕಾನ ಕಾವಡಿ ನಿವಾಸಿ ಹಾಗೂ ವಿದೇಶದಲ್ಲಿ ಉದ್ಯೋಗದಲ್ಲಿರುವ ಸಾಗರ್ ಎಂಬವರ ಪತ್ನಿ ದೀಪಾ(36)ಹಾಗೂ ನವಜಾತ ಶಿಶು ಸಾವನ್ನಪ್ಪಿದವರು.
ದೀಪಾ ಅವರನ್ನು ಹೆರಿಗೆಗಾಗಿ ಹೊಸದುರ್ಗದ ಖಾಸಗಿ ಆಸ್ಪತ್ರೆಯೊಂದಕ್ಕೆ ಸೋಮವಾರ ದಾಖಲಿಸಲಾಗಿದ್ದು, ಅಂದು ಸಂಜೆ ಹೆರಿಗೆಯಾಗಿತ್ತು. ಹೆರಿಗೆಯಾದ ಅಲ್ಪ ಹೊತ್ತಿನಲ್ಲಿ ಮಗು ಮೃತಪಟ್ಟಿದ್ದು, ಬಾಣಂತಿಗೆ ಅತಿಯಾದ ರಕ್ತಸ್ರಾವ ತಲೆದೋರಿದ ಹಿನ್ನೆಲೆಯಲ್ಲಿ ಕಣ್ಣೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿರಲಿಲ್ಲ. ಬೇಕಲ ಠಾಣೆ ಪೊಲೀಸರು ಅಸಹಜ ಸಾವಿ ಬಗ್ಗೆ ಕೇಸು ದಾಖಲಿಸಿಕೊಂಡಿದ್ದಾರೆ. ದೀಪಾ ಅವರದ್ದು ಎರಡನೇ ಹೆರಿಗೆ ಇದಾಗಿದ್ದು, ಪುತ್ರಿಯಿದ್ದಾಳೆ.





