ಕುಂಬಳೆ: ಪುತ್ತಿಗೆ ಮುಹಿಮ್ಮಾತ್ ಶಿಕ್ಷಣ ಸಂಸ್ಥೆಗಳ ಶಿಲ್ಪಿ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಙಳ್ ಅವರ 19 ನೇ ಉರುಸ್ ಮುಬಾರಕ್ ಮತ್ತು ಮುಹಿಮ್ಮಾತ್ ಪದವಿ ಪ್ರದಾನ ಸಮ್ಮೇಳನವು ಬುಧವಾರ ಮುಹಿಮ್ಮತ್‍ನಲ್ಲಿ ಆರಂಭಗೊಂಡಿತು. ಸಯ್ಯಿದ್ ಮುಹಮ್ಮದ್ ಮದನಿ ತಂಙಳ್ ಮೊಗ್ರಾಲ್ ಝಿಯಾರತ್‍ಗೆ ನೇತೃತ್ವ ನೀಡಿದರು. ಸ್ವಾಗತ ಸಮಿತಿಯ
ಗುರುವಾರ ಬೆಳಗ್ಗೆ 8 ಗಂಟೆಗೆ ಹಜ್ಜ್ ಅಧ್ಯಯನ ತರಗತಿ ನಡೆಯಲಿದೆ. ಅಬ್ದುಲ್ ಕರೀಂ ಸಖಾಫಿ ಇಡುಕ್ಕಿ ತರಗತಿ ಮಂಡಿಸಲಿದ್ದಾರೆ.
ಫೆ.6ರಂದು ಮಧ್ಯಾಹ್ನ 2.30ಕ್ಕೆ ಸ್ಪೀಕರ್ ಯು.ಟಿ. ಖಾದರ್ ಸಮಾರಂಭ ಉದ್ಘಾಟಿಸುವರು. ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕರಾದ ಎ.ಕೆ.ಎಂ.ಅಶ್ರಫ್, ಎನ್.ಎ.ನೆಲ್ಲಿಕುನ್ಮುನ್, ಸಿ.ಎಚ್.ಕುಞಂಬು ಮೊದಲಾದವರು ಅತಿಥಿಗಳಾಗಿ ಭಾಗವಹಿಸುವರು. ಸಂಜೆ 7.30ಕ್ಕೆ ನಡೆಯುವ ಸನದ್ ದಾನ ಸಮ್ಮೇಳನವನ್ನು ಕೇರಳ ಮುಸ್ಲಿಂ ಜಮಾಅತ್ ನ ಪ್ರದಾನ ಕಾರ್ಯದರ್ಶಿ ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ತಂಙಳ್ ಉದ್ಘಾಟಿಸುವರು. ಕೇರ ಸಮಸ್ತ ಅಧ್ಯಕ್ಷ ಇ.ಸುಲೈಮಾನ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಇಂಡಿಯನ್ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಪದವಿ ಪ್ರದಾನ ಪ್ರಭಾಷಣ ನಡೆಸುವರು. .
7 ರಂದು ಸಂಜೆ 7ಕ್ಕೆ ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಪ್ರಭಾಷಣ ಮಾಡಲಿದ್ದಾರೆ. 8ರಂದು ಬೆಳಗ್ಗೆ ತಮಿಳು ಪ್ರತಿನಿಧಿ ಸಮ್ಮೇಳನವನ್ನು ಸಯ್ಯಿದ್ ಹಬೀಬ್ ಅಹ್ದಲ್ ಅವರ ಅಧ್ಯಕ್ಷತೆಯಲ್ಲಿ ಕಮಾಲ್ ಸಖಾಫಿ ಚೆನ್ನೈ ಉದ್ಘಾಟಿಸುವರು. 9ರಂದು ಬೆಳಗ್ಗೆ 11ಕ್ಕೆ ನಡೆಯುವ ಮೌಲಿದ್ ಮಜ್ಲಿಸ್‍ಗೆ ಸಯ್ಯಿದ್ ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಕಣ್ಣವಂ ನೇತೃತ್ವ ವಹಿಸಲಿದ್ದಾರೆ ಸಂಜೆ 6.30 ರಿಂದ ನಡೆಯುವ ಅಹ್ದಲಿಯ್ಯ ಆಧ್ಯಾತ್ಮಿಕ ಸಮ್ಮೇಳನವನ್ನು ಸಮಸ್ತ ಉಪಾಧ್ಯಕ್ಷ ಸಯ್ಯಿದ್ ಕೆ.ಎಸ್.ಅಟ್ಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸುವರು.ಬಿ.ಎಸ್.ಅಬ್ದುಲ್ಲಕುಞÂ ಫೈಝಿ ಅಧ್ಯಕ್ಷತೆ ವಹಿಸುವರು. ರಾತ್ರಿ ತುಪ್ಪದ ಅನ್ನ ವಇತರಣೆಯೊಂದಿಗೆ ಉರುಸ್ ಸಮಾರೋಪಗೊಳ್ಳುವುದು.




