ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಬುಧವಾರ ಸಂಪನ್ನಗೊಂಡಿತು. ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ, ಮಧ್ಯಾಹ್ನ ಧ್ವಜಾವರೋಹಣ ನಡೆಯಿತು. ದೇವಾಲಯದ ಪವಿತ್ರ ಕೆರೆ ಶಂಖತೀರ್ಥದಲ್ಲಿ ನಡೆದ ಕಜಂಬು ಉತ್ಸವದಲ್ಲಿ ನೂರರಷ್ಟು ಮಕ್ಕಳಿಗೆ ಪವಿತ್ರ ಸ್ನಾನ ಮಾಡಿಸಲಾಯಿತು. ನಂತರ ಅಶ್ವಾರೂಢ ಶ್ರೀ ಉಳ್ಳಾಲ್ತಿ ದೈವದ ಸವಾರಿ, ಉಳ್ಳಾಲ್ತೀ ನೇಮ ನೆರವೇರಿತು.
(ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಉಳ್ಳಾಲ್ತೀ ದೈವದ ನೇಮ ನಡೆಯಿತು.)






