ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇಂದಿನಿಂದ (ಫೆ.11) 16 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ ಹಸಿರುವಾಣಿ ಕಾಣಿಕಾ ಸಂಗ್ರಹ ಅಭಿಯಾನದೊಂದಿಗೆ ಉಗ್ರಾಣ ತುಂಬಿಸುವ ಕಾರ್ಯಕ್ರಮ ಜರಗಿ ಉತ್ಸವಕ್ಕೆ ನಾಂದಿಯಾಗಲಿದೆ. ಅಪರಾಹ್ನ 5,30ಕ್ಕೆ ಎಡನೀರು ಮಠಾಧೀಶ ಶ್ರೀ ಸಚ್ಛಿದಾನಂದ ಭಾರತೀ ಶ್ರೀಪಾದಂಗಳ ಆಶೀರ್ವಚನದಲ್ಲಿ ಶಿವಸಂದೇಶ ಸಭಾ ನಡೆಯಲಿದೆ. ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ಉಪಸ್ಥಿತಿಯಲ್ಲಿ ನಡೆಯುವ ಸಭೆಯಲ್ಲಿ ಉದ್ಯಮಿ, ದಾನಿ ಕೆ.ಕೆ.ಶೆಟ್ಟಿ ಅಹ್ಮದ್ ನಗರ, ವಸಂತ ಪೈ ಬದಿಯಡ್ಕ, ಸಿ.ಎ.ಸುಧೀರ್ ಕುಮಾರ್ ಶೆಟ್ಟಿ ಅತಿಥಿಗಳಾಗಿ ಪಾಲ್ಗೊಳ್ಳುವರು. ರಾತ್ರಿ 8.30ರಿಂದ ಸಾಮಗಾನ ಪ್ರಿಯ ವೇದಿಕೆಯಲ್ಲಿ ಐನೂರು ಭಜನಾರ್ಥಿಗಳೊಂದಿಗೆ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಅವರಿಂದ ಶಿವಾರ್ಪಣಂ ವಿಶಿಷ್ಟ ಸಂಕೀರ್ತನೆ ಜರಗಲಿದೆ. ಸಂಜೆ 6.30ರಿಂದ ಪಾವಂಜೆ ಮೇಳದ ಯಕ್ಷಗಾನ “ಶಿವಲೀಲಾಮೃತ” ಪ್ರದರ್ಶನಗೊಳ್ಳಲಿದೆ.
ಫೆ.12ರಂದು(ನಾಳೆ) ವೈದಿಕ ಕಾರ್ಯಕ್ರಮ, ಭಜನಾರ್ಪಣಂ, ಶಾಸ್ತ್ರೀಯ ಸಂಗೀತ, ತಾಳಮದ್ದಳೆ, ಕುಣಿತ ಭಜನೆ, ಕೈಚಪ್ಪಾಳೆ ಕುಣಿತ, ಭರತನಾಟ್ಯ, ಶಾಸ್ತ್ರೀಯ ಸಂಗಿತ ಜರಗಲಿದೆ.




