ಕಾಸರಗೋಡು: ಬಿಜೆಪಿ ಉದುಮ ಸಂಘಟನಾ ಮಂಡಲ ಸಮಿತಿ ಅಧ್ಯಕ್ಷರಾಗಿ ಶೈನಿ ಮೋಳ್ ಶಶಿಕುಮಾರ್ ಅಧಿಕಾರ ಸ್ವೀಕರಿಸಿದರು. ಈ ಬಗ್ಗೆ ನಡೆದ ಸಮಾರಂಬವನ್ನು ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಶ್ರೀಕಾಂತ್ ಉದ್ಘಾಟಿಸಿದರು. ಮಂಡಲ ಸಮಿತಿ ಮಾಜಿ ಅಧ್ಯಕ್ಷ ಕೆ.ಟಿ. ಪುರುಷೋತ್ತಮ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಮಾಜಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್, ಉಪಾಧ್ಯಕ್ಷ ಪಿ. ರಮೇಶ್, ಕಾರ್ಯದರ್ಶಿ ಮನುಲಾಲ್ ಮೇಲತ್, ಬಿಜೆಪಿ ಸೆಲ್ ಸಂಯೋಜಕ ಎನ್. ಬಾಬುರಾಜ್, ಮಂಡಲ ಸಮಿತಿ ಉಪಾಧ್ಯಕ್ಷರಾದ ಎಂ. ಸದಾಶಿವನ್, ತಂಬಾನ್ ಆಚೇರಿ, ಮುಳಿಯಾರ್ ಮಂಡಲ ಸಮಿತಿ ಅಧ್ಯಕ್ಷ ದಿಲೀಪ್ ಪಲ್ಲಂಜಿ,
ಜಿಲ್ಲಾ ಸಮಿತಿ ಸದಸ್ಯರಾದ ಶ್ರೀನಿವಾಸನ್, ವೈ. ಕೃಷ್ಣದಾಸ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿಗಳಾದ ಟಿ.ವಿ. ಸುರೇಶ್ ಸ್ವಾಗತಿಸಿದರು. ರತೀಶ್ ಪುಲ್ಲೂರು ವಂದಿಸಿದರು. ಈ ಸಂದರ್ಭ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆಯಾಗಿ ಆಯ್ಕೆಯಾದ ಎಂ.ಎಲ್. ಅಶ್ವಿನಿ ಮತ್ತು ಉದುಮ ಮಂಡಲ ಸಮಿತಿ ಅಧ್ಯಕ್ಷೆ ಶೈನಿಮೋಳ್ ಅವರನ್ನು ಬಿಜೆಪಿ ಕಾರ್ಯಕರ್ತರು ಅಭಿನಂದಿಸಿದರು.




