ಕಾಸರಗೋಡು: ಸದ್ಗುರು ತ್ಯಾಗಬ್ರಹ್ಮ ಸಂಗೀತ ಸಭೆಯ ನೇತೃತ್ವದಲ್ಲಿ ತ್ಯಾಗರಾಜ-ಪುರಂದರದಾಸ ಸಂಗೀತ ಆರಾಧನೆಯ ಭಾಗವಾಗಿ `ಉಂಛವೃತ್ತಿ' ಭಾನುವಾರ ಕಾಞಂಗಾಡು ಗಣೇಶಮಂದಿರದ ಪರಿಸರದಲ್ಲಿ ನಡೆಯಿತು.
ವಿದುಷಿ ಉಷಾ ಈಶ್ವರ ಭಟ್, ಮನೋಜ್ ಪಯ್ಯನ್ನೂರು, ಕೆವಿಎಸ್ ಬಾಬು, ಪ್ರಭಾಕರ ಕುಂಜಾರು, ಬಾಲರಾಜ ಬೆದ್ರಡಿ, ಗಣರಾಜ ಕಾರ್ಲೆ, ನವನೀತ ಕೃಷ್ಣನ್, ಮೃದಂಗ ವಿದ್ವಾನ್ ಕೆ.ವಿ.ಪ್ರಸಾದ್, ರಾಜನ್ ಪಯ್ಯನ್ನೂರು, ರಾಜೀವ್ ಗೋಪಾಲ್ ವೆಳ್ಳಿಕೋತ್ ಮೊದಲಾದವರು ನೇತೃತ್ವ ವಹಿಸಿದ್ದರು.

.jpg)

