ಕಾಸರಗೋಡು: ಎಣ್ಮಕಜೆ ಪಂಚಾಯಿತಿ ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಸ್ಥಾಪಕ ರೂವಾರಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸಂಜೀವ ರೈ ಚಿಲ್ಮೆತ್ತಾರು ಅವರಿಗೆ ಶಾಲೆ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು.
ಶಾಲೆಯ ನವೀಕೃತ ಶಾಲಾ ಕಟ್ಟಡಗಳ ಉದ್ಘಾಟನೆ, ಅಭಿನಂದನೆ ಮತ್ತು ಶಾಲಾ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಸಂಜೀವ ರೈ ಅವರ ನಿವಾಸ ಕೆಂಗಣಾಜೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕುಗ್ರಾಮದಲ್ಲಿ ಶಾಲೆಯ ಸ್ಥಾಪನೆಗೆ ದುಡಿದ ಧಾರ್ಮಿಕ, ಸಾಮಾಜಿಕ ಮುಂದಾಳು ಸಂಜೀವ ರೈ ಅವರ ಸಾಧನೆಗಳ ಬಗ್ಗೆ ಶಾಲಾ ಎಸ್‍ಎಸ್‍ಜಿ ಅಧ್ಯಕ್ಷ ಬಟ್ಯ ಮಾಸ್ಟರ್ ಮಾಹಿತಿ ನೀಡಿದರು. ಫಲ-ಪುಷ್ಪ, ಸ್ಮರಣಿಕೆಯೊಂದಿಗೆ ಸಂಜೀವರೈ-ಲಲಿತಾ ರೈ ದಂಪತಿಯನ್ನು ಶಾಲುಹೊದಿಸಿ ಗೌರವಿಸಲಾಯಿತು. ಶಾಲಾ ಎಸ್‍ಎಸ್‍ಜಿ ಉಪಾಧ್ಯಕ್ಷ ಮಾಲಿಂಗ ಕೆ, ಶಾಲಾ ಪಿಟಿಎ ಅಧ್ಯಕ್ಷ ರಾಜೇಶ್ ಬಿ, ಶಾಲಾ ಎಸ್‍ಎಂಸಿ ಅಧ್ಯಕ್ಷ ಬಾಲಕೃಷ್ಣ ಭಟ್ ಸಿ, ಬಿಆರ್‍ಸಿ ಕೋರ್ಡಿನೇಟರ್ ಸುರೇಶ್, ಶಿಕ್ಷಕ ಚಂದ್ರಹಾಸ್ ಹಾಗೂ ಶಾಲಾ ಶಿಕ್ಷಕರು, ಸಂಜೀವ ರೈ ಕುಟುಂಬಸ್ಥರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ರಾಜೇಶ್ ಬಜಕೂಡ್ಲು ವಂದಿಸಿದರು.






