ಕಾಸರಗೋಡು: ಹೊಸದುರ್ಗ ಕಲ್ಯಾಣ್ ರಸ್ತೆಯ ಕ್ರಶರ್ ಸಂಸ್ಥೆ ಪ್ರಬಂಧಕನನ್ನು ತಡೆದು, ಬಂದೂಕು ತೋರಿಸಿ 12.30ಲಕ್ಷ ರೂ. ದರೋಡೆ ನಡೆಸಿ, ಪರಾರಿಯಾಗಲೆತ್ನಿಸಿದ ನಾಲ್ಕು ಮಂದಿ ಇತರ ರಾಜ್ಯ ಕಾರ್ಮಿಕರ ತಂಡವನ್ನು ಮಂಗಳೂರು ಪೊಲೀಸರ ನೆರವಿನಿಂದ ಹೊಸದುರ್ಗ ಠಾಣೆ ಪೊಲೀಸರು ಅತ್ಯಂತ ಸಾಹಸಕರ ರೀತಿಯಲ್ಲಿ ಬಂಧಿಸಿದ್ದಾರೆ.
ಬಿಹಾರ ನಿವಾಸಿಗಳಾದ ಮುಹಮ್ಮದ್ ಇಬ್ರಾಹಿಂ ಆಲಂ(21), ಮುಹಮದ್ ಮಾಲಿಕ್ ಅಲಿಯಾಸ್ ಎಂ.ಡಿ ಮಾಲಿಕ್(21), ಮುಹಮ್ಮದ್ ಫಾರೂಕ್(26)ಹಾಗೂ ಅಸ್ಸಾಂ ಹಜೋಯ್ ಜಿಲ್ಲೆಯ ಧನಂಜಯ್ ಭೋರಾ(22)ಬಂಧಿತರು.
ಕಾಞಂಗಾಡಿನಲ್ಲಿ ಕಾರ್ಯಾಚರಿಸುತ್ತಿರುವ ಜಾಸ್ ಗ್ರಾನೈಟ್ ಅಗ್ರಿಗೇಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ರಬಂಧಕ ಕೋಯಿಕ್ಕೋಡ್ ನಿವಾಸಿ ಪಿ.ಪಿ.ರವೀಂದ್ರನ್(56) ಎಂಬವರನ್ನು ಅಡ್ಡಗಟ್ಟಿ ದರೋಡೆ ನಡೆಸಲಾಗಿದೆ. ಕೆಲಸ ಮುಗಿಸಿ ವಾಸ ಸ್ಥಳಕ್ಕೆ ತೆರಳಲು ಆಟೋ ರಿಕ್ಷಾಕ್ಕಾಗಿ ಕಾಯುತ್ತಿದ್ದ ಸಂದರ್ಭ ಮೂರು ಮಂದಿಯ ತಂಡ ಬಂದೂಕು ತೋರಿಸಿ ಬೆದರಿಸಿ ಇವರ ವಶದಲ್ಲಿದ್ದ ಹಣದ ಬ್ಯಾಗ್ ಕಸಿದು ಪರಾರಿಯಾಗಿದೆ. ಬಂಧಿತರಿಂದ 9.64 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಮೊತ್ತ ಹಾಗೂ ದರೋಡೆಗೆ ಬಳಸಿದ ಕೋವಿ ಪತ್ತೆಗಾಗಿ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕಾರ್ಮಿಕರ ಸೋಗಿನಲ್ಲಿ ಕೇರಳಕ್ಕೆ ಆಗಮಿಸುವ ಉತ್ತರದ ರಾಜ್ಯಗಳ ಬಹುತೇಕ ಕಾರ್ಮಿಕರು ದರೋಡೆ, ಮಹಿಳೆಯರ ಮಾನಭಂಗ, ಕೊಲೆ ಸೇರಿದಂತೆ ಹಲವಾರು ದುಷ್ಕøತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಲ್ಲಿಂದ ಪರಾರಿಯಾಗುತ್ತಿರುವುದು ಸಾಮಾನ್ಯವಾಗಿದೆ.




