ಕಾಸರಗೋಡು: ಐಎಂಎ ಸಂಘಟನೆಯನ್ನು ಬಲಪಡಿಸುವ ಹಾಗೂ ಸದಸ್ಯತ್ವ ಹೆಚ್ಚಿಸುವ ನಿಟ್ಟಿನಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ಡಾ.ಕೆ.ಎ.ಶ್ರೀವಿಲಾಸನ್ ನೇತೃತ್ವದಲ್ಲಿ ಐಎಂಎ ಕೇರಳ ಯಾತ್ರೆ ಕಾಸರಗೋಡಿನಿಂದ ಅರಂಭಗೊಂಡಿತು. ಕಾಸರಗೋಡು ಹೊಸ ಬಸ್ ನಿಲ್ದಾಣದ ಬಳಿಯ ಹೋಟೆಲ್ ಸಿಟಿ ಟವರ್ ಮುಂಭಾಗದಲ್ಲಿ ನಡೆದ ಸಮಾರಂಭದಲ್ಲಿ ಐಎಂಎ ರಾಷ್ಟ್ರೀಯ ಸಮಿತಿ ಮಾಜಿ ಉಪಾಧ್ಯಕ್ಷ ಡಾ.ಬಾಬು ರವೀಂದ್ರನ್ ಪ್ಲ್ಯಾಗ್‍ಆಫ್ ನಡೆಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಐಎಂಎ ಕಾಸರಗೋಡು ಶಾಖೆಯ ಅಧ್ಯಕ್ಷ ಡಾ.ಹರಿಕಿರಣ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ಡಾ.ಕೆ.ಎ.ಶ್ರೀವಿಲಾಸನ್, ಮಾಜಿ ರಾಜ್ಯಾಧ್ಯಕ್ಷ ಶ್ರೀ ಜೋಸೆಫ್ ಬೆನವನ್, ರಾಜ್ಯ ಕಾರ್ಯದರ್ಶಿ ಡಾ.ಶಶಿಧರನ್ ಕೆ, ಉತ್ತರ ವಲಯ ಉಪಾಧ್ಯಕ್ಷೆ ಡಾ.ಅಜಿತಾ ಪಿ.ಎನ್, ರಾಜ್ಯ ಸಮಿತಿ ನೇತಾರರಾದ ಡಾ.ಸುದರ್ಶನ್, ಡಾ.ಗೋಪಿನಾಥನ್, ಡಾ.ಗೋಪಿಕುಮಾರ್, ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಬಿ.ನಾರಾಯಣ.ನಾಯ್ಕ್, ಡಾ. ಜನಾರ್ದನ ನಾಯ್ಕ್, ಡಾ. ದೀಪಿಕಾ ಕಿಶೋರ್, ಡಾ.ಕಾಸಿಂ ಟಿ, ಡಾ.ಜಿತೇಂದ್ರ ರೈ, ಡಾ.ಮಾಯಾ ಮಲ್ಯ, ಡಾ.ರೇಖಾ ರೈ, ಡಾ. ಅಣ್ಣಪ್ಪ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.




