ಕಾಸರಗೋಡು: ನೀರ್ಚಾಲು ಬಾಂಜತ್ತಡ್ಕ ನಿವಾಸಿ, ಸಿಪಿಐ ನೇತಾರ ಸೀತಾರಾಮ ಎಂಬವರನ್ನು ಇರಿದು ಕೊಲೆಗೆ ಯತ್ನಿಸಿದ ಪ್ರಕರಣದ ಅಪರಾಧಿಗಳಾದ ನೀರ್ಚಾಲು ಬಾಂಜತ್ತಡ್ಕ ನಿವಾಸಿ ರವಿತೇಜ ಹಾಗೂ ನೀರ್ಚಾಲು ಕೈಲಂಕಜೆ ನಿವಾಸಿ ಪ್ರದೀಪ್‍ರಾಜ್ ಯಾನೆ ಕುಟ್ಟ ಎಂಬವರಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ಒಂಬತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ 60ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸದಿದ್ದಲ್ಲಿ, ಅಪರಾಧಿಗಳು ಆರು ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ಸೂಚಿಸಲಾಗಿದೆ.
2016ಸೆ. 5ರಂದು ನೀರ್ಚಾಲು ಬಾಂಜತ್ತಡ್ಕದಲ್ಲಿ ಸೀತಾರಾಮ ಅವರನ್ನು ಹಾದಿಮಧ್ಯೆ ತಡೆದುನಿಲ್ಲಿಸಿ ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.




