ಕಾಸರಗೋಡು : ನಗರದ ತಾಳಿಪಡಪ್ಪು ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ್ ಆಶ್ರಯಧಾಲ್ಲಿ ಆಯುರ್ವೇದ ಉಚಿತ ವೈದ್ಯಕೀಯ ಶಿಬಿರ ಜರಗಿತು. ಬಾಯಾರು ಪ್ರಸಾಂತಿ ಕ್ಲಿನಿಕ್ ವೈದ್ಯರಾಧ ಡಾ. ಬಿ.ಸತ್ಯನಾರಾಯಣ ಶಿಬಿರ ಉದ್ಘಾಟಿಸಿದರು.
ಪೆರ್ಲ ಚಿನ್ಮಯ ಕ್ಲಿನಿಕ್ ವೈದ್ಯ ಡಾ. ಬಿ.ಆರ್.ಕೃಷ್ಣ ಮೋಹನ ಹಾಗೂ ಕಾಸರಗೋಡು ಜಿಲ್ಲಾ ಸತ್ಯಸಾಯಿ ಸೇವಾ ಸಂಸ್ಥೆಗಳ ಪಧಾಧಿಕಾರಿಗಳು ಭಾಗವಹಿಸಿದ್ದರು. ಶಿಬಿರದಲ್ಲಿ .ನೂರಕ್ಕೂ ಹೆಚ್ಚು ಮಂದಿ ರೋಗಿಗಳ ತಪಾಸಣೆ ನಡೆಸಲಾಯಿತು. ಶಿಬಿರಾರ್ಥಿಗಳಿಗೆ ಉಚಿತ ಔಷದ ವಿತರಣೆ ನಡೆಯಿತು.




