ಕಾಸರಗೋಡು: ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ವೆಸ್ಟ್ ಯೂನಿಟ್ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕಾಸರಗೋಡು ತಚ್ಚಂಗಾಡ್ ನಿವಾಸಿ ಶ್ರೀಮತಿ ವಿಲಾಸಿನಿ ರಾಜನ್ ಅವರನ್ನು ಸನ್ಮಾನಿಸಲಾಯಿತು. ದಿನ ಪತ್ರಿಕೆಗಳ ಸಂಗ್ರಹದ ಹವ್ಯಾಸ ಹೊಂದಿರುವ ಈ ಸಾಧಕಿ, ಕಳೆದ 2016ರಿಂದ ಮನೆಗೆ ತರುತ್ತಿರುವ ದಿನಪತ್ರಿಕೆಯನ್ನು ಸಂಗ್ರಹಿಸಿಟ್ಟುಕೊಳ್ಳುವುದರ ಜತೆಗೆ ಇವುಗಳನ್ನು ತಿಂಗಳು, ವರ್ಷಕ್ಕೆ ಹೊಂದಿಕೊಂಡು ಜೋಡಿಸಿಟ್ಟುಕೊಳ್ಳುವ ಮೂಲಕ ಆದರ್ಶಪ್ರಯರಾಗಿದ್ದಾರೆ.
1999 ರಿಂದಲೇ ದಿನ ಪತ್ರಿಕೆಯನ್ನು ಸಂಗ್ರಹಿಸಿಟ್ಟುಕೊಳ್ಳುವ ಹವಾಸ್ಯ ಬೆಳೆಸಿಕೊಂಡಿದ್ದರು. ಇದನ್ನು ಗರುತಿಸಿ ಅವರ ನಿವಾಸಕ್ಕೆ ತೆರಳಿ ಯೂನಿಟ್ ಅಧ್ಯಕ್ಷ ವಸಂತ ಕೆರೆಮನೆ ನೇತೃತ್ವದ ಸದಸ್ಯರು ವಿಲಾಸಿನಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಎಕೆಪಿಎ ಕಾಸರಗೋಡು ವಲಯ ಕೋಶಾಧಿಕಾರಿ ಮನು ಎಲ್ಲೋರ ಸ್ಮರಣಿಕೆ ನೀಡಿ ಗೌರವಿಸಿದರು. ಯೂನಿಟ್ ಸಾಂತ್ವನ ಕೋರ್ಡಿನೇಟರ್ ಶಾಲಿನಿ ರಾಜೇಂದ್ರನ್, ಸಮಿತಿ ಸದಸ್ಯರಾದ ಚಂದ್ರಶೇಖರ, ಸುಬ್ರಹ್ಮಣ್ಯ ವಿಡಿಯೋನಿಕ್ಸ್ ಯೂನಿಟ್ ಕೋಶಾಧಿಕಾರಿ ಗಣೇಶ್ ರೈ ಉಪಸ್ಥಿತರಿದ್ದರು.





