ಕಾಸರಗೋಡು: ಕನ್ನಡ ಭವನದ ಅಧೀನದಲ್ಲಿ ಚಟುಟಿಕೆ ನಡೆಸುತ್ತಿರುವ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ಅದ್ಯಕ್ಷೆಯಾಗಿ ರುಬೀನಾ ಎಂ. ಎ ಆಯ್ಕೆಯಾಗಿದ್ದಾರೆ. ಕನ್ನಡ ಭವನದ ಕೊಡಗು ಜಿಲ್ಲಾ ಘಟಕ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಇವರು ರುಬೀನಾ ಎಂ. ಎ ಇವರ ನಾಮನಿರ್ದೇಶನ ಮಾಡಿದರು. ಕೊಡಗು ಕನ್ನಡ ಭವನ ಪ್ರದಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಅನುಮೋದಿಸಿದರು.
ಪೆರಿಯಂಡ ಯಶೋಧ, ಬೊಟ್ಟೋಳಂಡ ನಿವ್ಯಾ ಕಾವೇರಮ್ಮ ಉಪಾಧ್ಯಕ್ಷರು, ಚಂದನ್ ನಂದರಬೆಟ್ಟು ಕೋಶಾಧಿಕಾರಿ, ಕರವಂಡ ಸೀಮಾ ಗಣಪತಿ, ಪಳಂಗೀಯಂಡ ಶರತ್ ಬೋಪಣ್ಣ, ಕಿಶೋರ್ ರೈ ಕತ್ತಲೆಕಾಡು, ಸಂಕೇತ್ ಕೆ. ಎ., ಹೇಮಂತ್ ಪರೇರಾ. ಪಂದ್ಯಂಡ ರೇಣುಕಾ ಸೋಮಯ್ಯ, ಅಮ್ಮಾಟಂಡ ವಿಂದ್ಯಾ ದೇವಯ್ಯ, ಮೊಣ್ಣಂಡ ವಿನು ಕಾರ್ಯಪ್ಪ, ಕಾಣತಂಡ ಭವ್ಯ ದೇವಯ್ಯ, ಉಡುವೆರ ರೇಖಾ ರಘು ಇವರನ್ನು ಕಾರ್ಯಕಾರೀ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಗಿದೆ. ಮಾರ್ಚ್ ಕೊನೆಯ ವಾರದಲ್ಲಿ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಗೌರವ ಅಧ್ಯಕ್ಷರಾದ ಬೊಳ್ಳಜಿರ ಬಿ. ಅಯ್ಯಪ್ಪ ಹಾಗೂ ಕಾಸರಗೋಡು ಕನ್ನಡಭವನದ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.






