ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪುಳಿಕ್ಕಾಲ್‍ನಲ್ಲಿ ಸತತ ಮೂರನೇ ದಿನವೂ ಚಿರತೆ ಕಾಣಿಸಿಕೊಂಡಿದ್ದು, ಈ ಬಗ್ಗೆ ಮಹಿಳೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಆಸುಪಾಸಿನ ಜನತೆ ಹುಡುಕಾಡುವ ಮಧ್ಯೆ ತಡರಾತ್ರಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಕುರುಚಲು ಕಾಡಿನಲ್ಲಿ ಮರೆಯಾಗಿರುವುದಾಗಿ ಮಾಹಿತಿಯಿದೆ. ಈ ಮಧ್ಯೆ ಪುಳಿಕ್ಕಾಳ್ ನಿವಾಸಿಯೊಬ್ಬರ ಸಾಕು ನಾಯಿ ನಾಪತ್ತೆಯಾಗಿದ್ದು, ಚಿರತೆ ಕೊಂಡೊಯ್ದಿರುವ ಶಂಕೆ ಎದುರಾಗಿದೆ. ಮಲೆನಾಡುಪ್ರದೇಶದಲ್ಲಿ ಚಿರತೆ ಸಂಚಾರದಿಂದ ನಾಡಿನ ಜನತೆಗೆ ರಾತ್ರಿ ನಿದ್ದೆಯಿಲ್ಲದ ಸ್ಥಿತಿ ಎದುರಾಗಿದೆ.




