ಕಾಸರಗೋಡು: ವಾಮಂಜೂರು ಚೆಕ್‍ಪೋಸ್ಟ್ ಸನಿಹ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಎಸ್‍ಡಿಪಿಐ ಕಾರ್ಯಕರ್ತರ ವಿರುದ್ಧ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಅಕ್ಬರ್, ಬಿ.ಎಂ ಮಹಮ್ಮದ್, ಮಹಮ್ಮದ್ ಇಕ್ಬಾಲ್, ಅಹಮ್ಮದ್ ಕಬೀರ್, ಅಬ್ದುಲ್ ನಾಸರ್ ಸೇರಿದಂತೆ 30ಕ್ಕೂ ಹೆಚ್ಚು ಮಂದಿ ವಿರುದ್ಧ ಈ ಕೇಸು ದಾಖಲಾಗಿದೆ. ಎಸ್‍ಡಿಪಿಐ ಮಂಜೇಶ್ವರ ಪಂಚಾಯಿತಿ ಸಮಿತಿ ಸದಸ್ಯರು ಪೊಲೀಸರ ನಿರ್ದೇಶ ಉಲ್ಲಂಘಿಸಿ ರಸ್ತೆ ತಡೆ ನಡೆಸಿರುವುದಲ್ಲದೆ, ಧ್ವನಿವರ್ಧಕ ಬಳಸಿ ಘೋಷಣೆ ಮೊಳಗಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಈ ಕೇಸು ದಾಖಲಾಗಿದೆ. ಅವೈಜ್ಞನಿಕ ರೀತಿಯ ರಸ್ತೆ ನಿಮಣ ಖಂಡಿಸಿ ಎಸ್‍ಡಿಪಿಐ ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಿತ್ತು.



