ತಿರುವನಂತಪುರಂ: 2025-26ನೇ ಹಣಕಾಸು ವರ್ಷಕ್ಕೆ ಶಾಲಾ ಸಮವಸ್ತ್ರ ಭತ್ಯೆ ಯೋಜನೆಗೆ 80.34 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಸಾಮಾನ್ಯ ಶಿಕ್ಷಣ ಸಚಿವ ವಿ. ಶಿವನ್‍ಕುಟ್ಟಿ ಹೇಳಿದ್ದಾರೆ.
ಒಂದರಿಂದ ಎಂಟನೇ ತರಗತಿಯವರೆಗಿನ 13.16 ಲಕ್ಷ ಮಕ್ಕಳಿಗೆ 600 ರೂ.ಗಳ ಕ್ರಮದಲ್ಲಿ 79.01 ಕೋಟಿ ರೂ.ಗಳನ್ನು ಭತ್ಯೆಯಾಗಿ ನಿಗದಿಪಡಿಸಲಾಗಿದೆ ಎಂದು ಸಚಿವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಾಲೆ ತೆರೆಯುವ ಮೊದಲು ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ತಲುಪಿಸಲಾಗುವುದು. ಸಾಮಾನ್ಯ ಶಿಕ್ಷಣ ಇಲಾಖೆ ಮತ್ತು ಕೈಮಗ್ಗ ಇಲಾಖೆಯ ಜಂಟಿ ಆಶ್ರಯದಲ್ಲಿ ಜಾರಿಗೆ ತರಲಾದ ಉಚಿತ ಸಮವಸ್ತ್ರ ಯೋಜನೆಯನ್ನು ಎರಡು ಘಟಕಗಳಲ್ಲಿ ಅನುμÁ್ಠನಗೊಳಿಸಲಾಗಿದೆ.
ಸಾಮಾನ್ಯ ಶಿಕ್ಷಣ ನಿರ್ದೇಶನಾಲಯದ ಅಡಿಯಲ್ಲಿ ಉಚಿತ ಸಮವಸ್ತ್ರ ಯೋಜನೆ ಮತ್ತು ಉಚಿತ ಕೈಮಗ್ಗ ಸಮವಸ್ತ್ರ ಯೋಜನೆಂತೆ ನಿರ್ವಹಿಸಲಾಗುತ್ತದೆ..
ರಾಜ್ಯದ ಸ್ವತಂತ್ರ ಎಲ್‍ಪಿ ಮತ್ತು ಯುಪಿ ಸರ್ಕಾರಿ ಶಾಲೆಗಳಿಗೆ ಹಾಗೂ 1 ರಿಂದ 4 ನೇ ತರಗತಿಯವರೆಗಿನ ಅನುದಾನಿತ ಎಲ್‍ಪಿ ಶಾಲೆಗಳಿಗೆ ಕೈಮಗ್ಗ ಇಲಾಖೆಯಿಂದ ಕೈಮಗ್ಗ ಸಮವಸ್ತ್ರಗಳನ್ನು ಒದಗಿಸಲಾಗುತ್ತಿದೆ.





